ಸಾರಾಂಶ
ಹೊಳೆನರಸೀಪುರ ಪಟ್ಟಣದ ಗಣಪತಿ ಪೆಂಡಾಲಿನ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು. ಹಾಸನದ ವಿದ್ವಾನ್ ಬಿ ಎನ್ ಎಸ್ ಮುರುಳಿ ಹಾಗೂ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ, ಪುಷ್ಪ, ರೇಖಾ ರಮೇಶ್, ರೇಖಾ ಸುರೇಶ್, ಪೂರ್ಣಶ್ರೀ, ಹರಿಣಿ, ಸುಮನಾ, ಸಿರಿ ಅವರು ಹಾಡಿದ ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ, ಶಿವನು ಬಿಕ್ಷಕೆ ಬಂದ ನೋಡುಬಾರೆ ತಂಗಿ, ಕಾಣದ ಕಡಲಿಗೆ, ಶಂಕರಾ ಭರಣಂ ಚಿತ್ರದ ತೆಲುಗು ಗೀತೆ ಜೊತೆಗೆ ತಂಡದವರು ಹಾಡಿದ ಭಾವಗೀತೆ, ರಾಗಾಧಾರಿತ ಚಲನಚಿತ್ರೆ ಗೀತೆ, ಭಕ್ತಿಗೀತೆಗಳು ಸಭಿಕರು ತಲೆದೂಗುವಂತೆ ಮಾಡಿತು.
ಹೊಳೆನರಸೀಪುರ: ಪಟ್ಟಣದ ಗಣಪತಿ ಪೆಂಡಾಲಿನ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು.
ಹಾಸನದ ವಿದ್ವಾನ್ ಬಿ ಎನ್ ಎಸ್ ಮುರುಳಿ ಹಾಗೂ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ, ಪುಷ್ಪ, ರೇಖಾ ರಮೇಶ್, ರೇಖಾ ಸುರೇಶ್, ಪೂರ್ಣಶ್ರೀ, ಹರಿಣಿ, ಸುಮನಾ, ಸಿರಿ ಅವರು ಹಾಡಿದ ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ, ಶಿವನು ಬಿಕ್ಷಕೆ ಬಂದ ನೋಡುಬಾರೆ ತಂಗಿ, ಕಾಣದ ಕಡಲಿಗೆ, ಶಂಕರಾ ಭರಣಂ ಚಿತ್ರದ ತೆಲುಗು ಗೀತೆ ಜೊತೆಗೆ ತಂಡದವರು ಹಾಡಿದ ಭಾವಗೀತೆ, ರಾಗಾಧಾರಿತ ಚಲನಚಿತ್ರೆ ಗೀತೆ, ಭಕ್ತಿಗೀತೆಗಳು ಸಭಿಕರು ತಲೆದೂಗುವಂತೆ ಮಾಡಿತು.ಸೇವಾ ಸಮಿತಿಯ ಆರ್.ಬಿ. ಪುಟ್ಟೇಗೌಡ, ಸುರೇಶ್ ಕುಮಾರ್, ಶಿವಕುಮಾರ್, ವೈ.ವಿ.ಚಂದ್ರಶೇಖರ್, ನಿವೃತ್ತ ಯೋಧ ಈಶ್ವರ್, ಅಶೋಕ್ ತಂಡದ ಗಾಯಕರನ್ನೆಲ್ಲಾ ಸನ್ಮಾನಿಸಿ ಗೌರವಿಸಿದರು.
ಸಮಿತಿಯ ಆರ್.ಬಿ.ಪುಟ್ಟೇಗೌಡ ಮಾತನಾಡಿ ಸ್ಥಳೀಯ ಕಲಾವಿದರು ಅತ್ಯುತ್ತಮ ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಗೀತಗಾಯನ ಹರಿಕಥೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.