ಸಾರಾಂಶ
ಕಡೂರು, ಗಾಂಧೀಜಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಜೊತೆಗೆ ತಮ್ಮ ನಡೆನುಡಿಗಳ ಮೂಲಕ ನಮಗೆ ಆದರ್ಶರಾಗಿದ್ದಾರೆ. ಅವರ ಕನಸಾದ ರಾಮರಾಜ್ಯವನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಬೇಕು ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ, ಕಡೂರು
ಗಾಂಧೀಜಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಜೊತೆಗೆ ತಮ್ಮ ನಡೆನುಡಿಗಳ ಮೂಲಕ ನಮಗೆ ಆದರ್ಶರಾಗಿದ್ದಾರೆ. ಅವರ ಕನಸಾದ ರಾಮರಾಜ್ಯವನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಬೇಕು ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.ತಾಲೂಕಿನ ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ಏರ್ಪಡಿಸಿದ್ದ 155 ನೇ ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಗಾಂಧೀಜಿಯವರು ತಮ್ಮ ತತ್ವ ಸಿದ್ಧಾಂತಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟಿದ್ದಾರೆ. ಅವರು ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಭಾಗವಹಿಸಿ ಇಂದಿಗೆ 100 ವರ್ಷವಾದ ಪ್ರಯುಕ್ತ ಕರ್ನಾಟಕ ಕಾಂಗ್ರೆಸ್ ಸಮಿತಿ ಆದೇಶದಂತೆ ಗಾಂಧಿ ನೆನಪು ಕಾರ್ಯಕ್ರಮ ನಡೆಯುತ್ತಿದೆ.ಗಾಂಧೀಜಿಯವರ ತತ್ವಗಳು ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ. ಅವರ ಪ್ರತಿಮೆ ಅಮೇರಿಕಾ, ಲಂಡನ್,ಆಫ್ರಿಕಾ ದಂತಹ ದೇಶಗಳಲ್ಲಿ ಅನಾವರಣ ಮಾಡಿರುವುದೇ ಸಾಕ್ಷಿ ಎಂದರು.
ಲಕ್ಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರನಾಯ್ಕ ಮಾತನಾಡಿ, ಕೆಪಿಸಿಸಿ ಆದೇಶದಂತೆ ಗಾಂಧಿ ನೆನಪು ಕಾರ್ಯಕ್ರಮದಡಿ ಗ್ರಾಮದಲ್ಲಿ ಜಾಥಾ, ಅಯ್ಯನ ಕೆರೆಯಲ್ಲಿ ಸ್ವಚ್ಛತೆ ಮತ್ತು ಕಾರ್ಯಕರ್ತರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿಯವರ ಸರಳ ಜೀವನವೇ ನಮಗೆ ಆದರ್ಶ. ಕಾಂಗ್ರೆಸ್ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅವರ ಅದರ್ಶ ಪಾಲಿಸಬೇಕು ಎಂದರು.ಎಪಿಎಂಸಿ ಮಾಜಿ ಸದಸ್ಯ ಪಿಳ್ಳೇನಹಳ್ಳಿ ಲೊಕೇಶ್ ಮಾತನಾಡಿ, 155 ನೇ ಜಯಂತಿಯಾದರೂ ನಾವು ಅದೇ ಹುಮ್ಮಸ್ಸಿನಿಂದ ಆಚರಿಸುತ್ತಿದ್ದೇವೆ ಎಂದರೆ ಅವರ ಆದರ್ಶಗಳೇ ಕಾರಣ ಎಂದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ರುದ್ರಮೂರ್ತಿ, ಅಮೀರ್, ನಟರಾಜ್, ಮಂಜುನಾಥ್, ರಘು, ಸಚ್ಚಿನ್, ಅಜ್ಜಯ್ಯ, ಕಿರಣ್, ಎನ್ ಡಿ ಚಂದ್ರಪ್ಪ, ಮೋಹನನಾಯ್ಕ, ಪಿಳ್ಳೇನಹಳ್ಳಿ ರವಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
3ಕೆಕೆಡಿಯು3. ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 155 ನೇ ಗಾಂಧೀ ಜಯಂತಿ ಆಚರಣೆ ನಡೆಯಿತು.