ಸಾರಾಂಶ
ಅಹಿಂಸೆ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಶ್ರಮಿಸಿದ ಗಾಂಧೀಜಿ ರಾಷ್ಟ್ರಪಿತ ಎನಿಸಿದರು.
ಯಲಬುರ್ಗಾ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಹಿಂಸೆ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಶ್ರಮಿಸಿದ ಗಾಂಧೀಜಿ ರಾಷ್ಟ್ರಪಿತ ಎನಿಸಿದರು. ಹಾಗೇ ದೇಶದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ತಮ್ಮ ಸರಳತೆ, ಪ್ರಾಮಾಣಿಕತೆಯ ಆಡಳಿತದಿಂದ ದೇಶ ಮುನ್ನಡೆಸಿದರು. ಇಬ್ಬರು ಮಹಾನ್ ಚೇತನರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಈ ಸಂದರ್ಭ ಪಪಂ ಸದಸ್ಯರಾದ ರೇವಣಪ್ಪ ಹಿರೆಕುರುಬರ, ರಿಯಾಜ್ ಅಹ್ಮದ್ ಖಾಜಿ, ಹನುಮಂತ ಭಜಂತ್ರಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಮಲ್ಲೇಶಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಜಕ್ಕಲಿ, ಈಶ್ವರ ಅಟಮಾಳಗಿ, ರೆಹಮನಸಾಬ್ ನಾಯಕ, ಬಸವರಾಜ ಈಳಿಗೇರ, ಶಿವು ರಾಜೂರ, ಶರಣಗೌಡ ಬಸಾಪುರ, ಬಸವರಾಜ ಅರಕೇರಿ, ಪುನೀತ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.