ಸಾರಾಂಶ
ಕರಾಟೆ ಕಲಿಯುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುತ್ತಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಕರಾಟೆ ಕಲಿಯುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದು ಕರಾಟೆ ಮಾಸ್ಟರ್ ಪ್ರಜ್ವಲ್ ಹೇಳಿದರು.ಗಾಂಧಿನಗರದ ಡಬ್ಲ್ಯುಎಫ್.ಎಸ್.ಕೆಒ ಕರಾಟೆ ಕ್ಲಾಸ್ ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಶರೀರಿಕವಾಗಿ ಮನಶಾಂತಿಯಿಂದ ಏಕಾಗ್ರತೆ ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಯ ಹಿತದೃಷ್ಟಿಯಿಂದ ಕರಾಟೆ ಕಲಿಯುವುದು ಅತ್ಯಾವಶ್ಯಕ. ಇದರಿಂದ ಅವರಿಗೆ ಆತ್ಮಸ್ಥೈರ್ಯ ಹೆಚ್ಚುವುದಲ್ಲದೆ, ಯಾವುದೇ ಸಂಕಷ್ಟ ಎದುರಾದರೂ ಅದನ್ನು ಎದುರಿಸುವ ಧೈರ್ಯ ಬರುತ್ತದೆ ಎಂದು ಅವರು ತಿಳಿಸಿದರು. ಮುಖ್ಯಅತಿಥಿಗಳಾಗಿ ಕರಾಟೆ ಮಾಸ್ಟರ್ ಪ್ರಜ್ವಲ್ ಗುರುಗಳಾದ ಮಂಜುನಾಥ್, ನಗರಪಾಲಿಕೆ ಮಾಜಿ ಸದಸಿಯ ಉದಯ್, ಕಾಂಗ್ರೆಸ್ ಯುವ ಮುಖಂಡ ವಿ. ವಿನೋದ್ ಕುಮಾರ್, ಕರ್ನಾಟಕ ಭೀಮಸೇನೆ ಸಂಘದ ಕಾರ್ಯದರ್ಶಿ ಎಂ. ಮಂಜುನಾಥ್ ಹಾಗೂ ಪ್ರಕಾಶ್, ಶಿವರಾಜ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಂಜುನಾಥ್ ಹಾಗೂ ಕರಾಟೆ ಪಟುಗಳ ಪೋಷಕರನ್ನು ಸನ್ಮಾನಿಸಿದರು. ಕರಾಟೆ ಪಟುಗಳು ತಮ್ಮ ಕರಾಟೆಯ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ರಜನಿ ಪ್ರಾರ್ಥಿಸಿದರು. ಯಶಸ್ವಿ, ಸೋನಾಲಿ ವಂದಿಸಿದರು. ಪ್ರಜ್ವಲ್ ನಿರೂಪಿಸಿದರು.