ಸಾರಾಂಶ
ಕುವೆಂಪು ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕೆಂದು ಬಾವಿಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಎಸ್. ಗಣೇಶ್ ಹೇಳಿದ್ದಾರೆ.
ತರೀಕೆರೆ : ಕುವೆಂಪು ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕೆಂದು ಬಾವಿಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಎಸ್. ಗಣೇಶ್ ಹೇಳಿದ್ದಾರೆ.
ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ, ಮಹಿಳಾ ಘಟಕ, ಹೋಬಳಿ ಘಟಕ, ನಗರ ಘಟಕ, ಯುವ ಘಟಕ, ಅರುಣೋದಯ ವಿದ್ಯಾ ಸಂಸ್ಥೆಯಿಂದ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಕುವೆಂಪು ಸಾಹಿತ್ಯದಲ್ಲಿ ಹೆಚ್ಚು ಸಾಮಾಜಿಕ ಪ್ರಜ್ಞೆ ಇರುತ್ತದೆ. ಕುವೆಂಪು ಅವರು ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ. ಅವರ ಕಥೆ, ಕಾದಂಬರಿ, ಮಹಾ ಕಾವ್ಯಗಳನ್ನು ರಚಿಸಿದ್ದು ಇಪ್ಪತ್ತನೆ ಶತಮಾನ ಕುವೆಂಪು ಯುಗದೆ ಎಂದು ಹೇಳಿದರು.
2800 ವರ್ಷಗಳಷ್ಟು ಇತಿಹಾಸ ಕನ್ನಡಕ್ಕಿದೆ. ಎಲ್ಲರೂ ಮಾತೃಭಾಷೆ ಕಲಿಯಬೇಕು. ಸಾಹಿತ್ಯ ಕೃತಿಗಳನ್ನು ಓದಿದರೆ ಚಿಂತನ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ಸಾಹಿತ್ಯ ತಲುಪಿಸುವಂತ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅರುಣೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಜಿ.ಎಚ್. ಶ್ರೀಹರ್ಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡವನ್ನು ಎಲ್ಲರೂ ಬೆಳೆಸಬೇಕು. ಶ್ರಾವಣ ಮಾಸ ಹಬ್ಬಗಳ ಮಾಸ. ಸಾಹಿತ್ಯ ಪರಿಷತ್ತಿನಿಂದ ಶಾಲಾ ಕಾಲೇಜುಗಳಲ್ಲಿ ಕನ್ನಡ ಸಂಘ ಸ್ಥಾಪಿಸಬೇಕು. ಎಲ್ಲ ರೀತಿಯಲ್ಲೂ ತಾವು ಸಹಕಾರ ನೀಡುವುದಾಗಿ ತಿಳಿಸಿದರು.
ಲಕ್ಕವಳ್ಳಿ ಸಾಹಿತಿ ಚಕ್ರವರ್ತಿ ಮಾತನಾಡಿ, ವಿದ್ಯಾರ್ಥಿಗಳಿಗೂ ಸಾಹಿತ್ಯ ಬಹಳ ಮುಖ್ಯ. ಸಾಹಿತ್ಯ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಕಸಾಪ ಕಸಬಾ ಹೋಬಳಿ ಅದ್ಯಕ್ಷ ಟಿ.ಎನ್.ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಯಿಂದ ಜನಪದ, ಇತಿಹಾಸ ಇತ್ಯಾದಿ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಚಂದ್ರಶೇಖರ್, ಮಂಜುನಾಥ್ ಗೀತೆಗಳನ್ನು ಹಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ, ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್, ಲೇಖಕ ತ.ಮ.ದೇವಾನಂದ, ಕಸಾಪ ಕೋಶಾಧ್ಯಕ್ಷ ಕೆ.ಜಯ ಸ್ವಾಮಿ, ಮಾಜಿ ಎಪಿಎಂಸಿ ಮಾಜಿ ನಿರ್ದೇಶಕ ಟಿ.ಆರ್.ಶ್ರೀಧರ್,ಶಿಕ್ಷಣ ಸಂಯೋಜಕ ರಾಘವೇಂದ್ರ, ಶಿಕ್ಷಕಿ ಜ್ಯೋತಿ ಸತೀಶ್, ಹಿಮಂತಶ್ರೀ, ವಿದ್ಯಾರ್ಥಿಗಳು ಭಾಗವಹಿಸಿದ್ದರು.30ಕೆಟಿಆರ್.ಕೆ.5ಃ
ತರೀಕೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಶ್ರಾವಣ ಸಾಹಿತ್ಯ ಸಂಭ್ರಮವನ್ನು ಅರುಣೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ಉದ್ಘಾಟಿಸಿದರು. ತಾ. ಕಸಾಪ ಅಧ್ಯಕ್ಷ ರವಿ ದಳವಾಯಿ, ಕಸಾಪ ಕಸಬಾ ಹೋಬಳಿ ಅದ್ಯಕ್ಷ ಟಿ.ಎನ್.ಜಗದೀಶ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್, ಸಾಹಿತಿ ಚಕ್ರವರ್ತಿ, ಲೇಖಕ ತ.ಮ.ದೇವಾನಂದ್, ಎಪಿಎಂಸಿ ಮಾಜಿ ನಿರ್ದೇಶಕ ಟಿ.ಆರ್.ಶ್ರೀಧರ್ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))