ಕಮಲಾಪುರ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಗಣೇಶ್ ಆಯ್ಕೆ

| Published : Feb 01 2025, 12:01 AM IST

ಕಮಲಾಪುರ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಗಣೇಶ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕಿನ ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಗಣೇಶ್ ಕಮಲಾಪುರ, ಉಪಾಧ್ಯಕ್ಷರಾಗಿ ಮಂಜುಳಾ ಅವರನ್ನು ಪೋಷಕರು, ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ದಾವಣಗೆರೆ: ಹರಿಹರ ತಾಲೂಕಿನ ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಗಣೇಶ್ ಕಮಲಾಪುರ, ಉಪಾಧ್ಯಕ್ಷರಾಗಿ ಮಂಜುಳಾ ಅವರನ್ನು ಪೋಷಕರು, ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಕೆ.ಎಸ್.ಈಶ್ವರಪ್ಪ, ಮಹಾಂತೇಶ್ ಕಣ್ಣಾಳರ, ಪ್ರಿಯಾ, ಶೃತಿ, ಜಿ.ಬಿ.ಗಂಗಾಧರ, ಹೊನ್ನಪ್ಪ, ಶಿವಕುಮಾರ ಬಾವಿಕಟ್ಟಿ, ನಿಜಲಿಂಗಪ್ಪ, ಗಂಗಮ್ಮ, ಸೌಮ್ಯ, ಶಿಲ್ಪಾ, ದೇವಕ್ಕ, ಹಳದಮ್ಮ, ಹನುಮಂತಪ್ಪ, ಎಂ.ಬಿ.ಪ್ರಶಾಂತ್, ನಾಗರತ್ನ ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆಯಲ್ಲಿ ಬಿಆರ್‌ಪಿ ಸಿ.ಕೆ.ಮಹೇಶ್, ಸಿಆರ್‌ಪಿ ಸುನಿತಾ ಸೇರಿದಂತೆ ಗ್ರಾಮದ ಮುಖಂಡರಾದ ಈಶ್ವರಪ್ಪ, ಹಾಲಸಿದ್ದಪ್ಪ, ಬಸವನಗೌಡ, ಚಂದ್ರಶೇಖರಪ್ಪ, ದೊಡ್ಡಬಸಪ್ಪ, ಮೂಕಪ್ಪ, ರಾಮಣ್ಣ, ಬಿ.ರಮೇಶ್, ಚನ್ನಪ್ಪ, ಎಂ.ಸುರೇಶ, ಎಂ.ರವಿಕುಮಾರ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ರಮೇಶ್ ಕಣ್ಣಾಳರ, ಮುಖ್ಯಶಿಕ್ಷಕ ಮಂಜುನಾಥ, ಶಿಕ್ಷಕರಾದ ಪ್ರಭುಗೌಡ ಪಾಟೀಲ್, ರಾಮನಗೌಡ ಪ್ಯಾಟಿ ಮತ್ತಿತರರು ಇದ್ದರು.