ಸಾರಾಂಶ
ಕಾಂಗ್ರೆಸ್ ನಾಯಕರೂ ಆದ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಅವರ ಹುಟ್ಟು ಹಬ್ಬ ಆಡಂಬರ ಇಲ್ಲದಿದ್ದರೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಗುಂಡ್ಲುಪೇಟೆಯಲ್ಲಿ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಾಂಗ್ರೆಸ್ ನಾಯಕರೂ ಆದ ಶಾಸಕ ಎಚ್.ಎಂ.ಗಣೇಶಪ್ರಸಾದ್ ಅವರ ಹುಟ್ಟು ಹಬ್ಬ ಆಡಂಬರ ಇಲ್ಲದಿದ್ದರೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ತಾಲೂಕಿನ ಹಿರೀಕಾಟಿ ಗೇಟ್ ಮತ್ತು ಹಿರೀಕಾಟಿ ಗ್ರಾಮ, ಅರೇಪುರ ಗೇಟ್ ಬಳಿಯ ೨ಮಹದೇಶ್ವರ ದೇವಸ್ಥಾನ, ತೊಂಡವಾಡಿ ಗ್ರಾಮದ ಹಾಲಹಳ್ಳಿ, ಕಮರಹಳ್ಳಿ, ಬೇಗೂರು ಗರಗನಹಳ್ಳಿ, ಬೆಂಡಗಳ್ಳಿ, ಮಳವಳ್ಳಿ, ಮಾಡ್ರಹಳ್ಳಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಗುಂಡ್ಲುಪೇಟೆ ಪಟ್ಟಣದ ಎಂಡಿಸಿಸಿ ಬ್ಯಾಂಕ್ ಮುಂದೆ ಶಾಸಕ ಗಣೇಶ್ ಪ್ರಸಾದ್ ಕೇಕ್ ಕತ್ತರಿಸಿದರು. ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಪುರಸಭೆ ಸದಸ್ಯರು, ಮುಖಂಡ ನವೀದ್ ಖಾನ್ ಹಾರ ಹಾಕಿದರು. ಕೇಕ್ ಕತ್ತರಿಸಿ ಸದಸ್ಯರ ಜೊತೆ ಸಂಭ್ರಮಿಸಿದರು.ಪಾರ್ವತಿ ಬೆಟ್ಟಕ್ಕೆ ಭೇಟಿ:
ಪಾರ್ವತಿ ಬೆಟ್ಟಕ್ಕೆ ತೆರಳಿದ ಶಾಸಕರು ದೇವರ ದರ್ಶನ ಪಡೆದರು. ನಂತರ ಮಂಚಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಸರಳ ಸಭೆಯಲ್ಲಿ ಭಾಗವಹಿಸಿ ಹುಟ್ಟುಹಬ್ಬ ಆಚರಿಸಿದರು. ಶಾಸಕರೊಂದಿಗೆ ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಬ್ಬಹಳ್ಳಿ ದೀಪು, ಪುರಸಭೆ ಅಧ್ಯಕ್ಷ ಕಿರಣ್ ಗೌಡ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರು ಇದ್ದರು.ಫ್ಲೆಕ್ಸ್ ಭರಾಟೆ ಇಲ್ಲ: ಪಟ್ಟಣದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್ ಭರಾಟೆ ಇರಲಿಲ್ಲ. ಪಟ್ಟಣದ ಎಂಡಿಸಿಸಿ ಬ್ಯಾಂಕ್ ಮುಂದೆ ಕೇಕ್ ಕತ್ತರಿಸುವ ವೇಳೆ ಶಾಸಕರ ಫೋಟೋಗಳು ರಾರಾಜಿಸಿದವು.