ಸಾರಾಂಶ
ವಿಜಯಪುರ: ಸಮಾಜದಲ್ಲಿ ಐಕ್ಯತೆ ಮೆರೆಯಲು ಮೊದಲಿಗೆ ಮಹಾರಾಷ್ಟ್ರದಲ್ಲಿ ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್‌ರು ಗಣೇಶೋತ್ಸವ ಆರಂಭಿಸಿದರು. ಇಂದು ಎಲ್ಲಾ ರಾಜ್ಯಗಳ ನಗರ, ಗ್ರಾಮೀಣ ಪ್ರದೇಶಗಳಲ್ಲೂ ವಿಜೃಂಭಣೆಯಿಂದ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಹೇಳಿದರು.

ಪಟ್ಟಣದ ನವಗ್ರಹ ಬೀದಿ ರಸ್ತೆಯಲ್ಲಿರುವ ಸ್ವಸ್ತಿಕ್ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಶ್ರೀ ವಿನಾಯಕಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ಸವಗಳನ್ನು ಏರ್ಪಡಿಸುವುದರಿಂದ ಹಿಂದುಗಳಲ್ಲಿ ಭಾವೈಕ್ಯತೆ, ಸಾಮರಸ್ಯ ಬೆಳೆಯುತ್ತದೆ. ಸ್ವಸ್ತಿಕ್ ಗೆಳೆಯರ ಬಳಗ ೧೭ ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾಜಣ್ಣ, ಮಾಜಿ ಸದಸ್ಯರಾದ ನವೀನ್, ಎಂ.ಎಸ್ ರವಿಶಂಕರ್, ನಾಗೇಂದ್ರ ನಾಣಿ, ಅರ್ಜುನ್, ವಿಶ್ವನಾಥ್ ಮಾಮ, ಸುರೇಶ್ ಬಾಬು, ಪ್ರಭಾಕರ್, ಉದ್ಯಮಿ ನವೀನ್, ಬಸವರಾಜು, ಚನ್ನಪ್ಪ, ಹಮಾಲಿ ಸಂಘದ ಮುನಿನಾರಾಯಣಪ್ಪ, ಮುನಿಕೃಷ್ಣ, ಸುರೇಶ, ಶಿವಕುಮಾರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜೆಪಿ ೧೯ವಿಜಯಪುರದಲ್ಲಿ ಸ್ವಸ್ತಿಕ್ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಶ್ರೀ ವಿನಾಯಕಸ್ವಾಮಿಗೆ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ರಾಜಣ್ಣ, ಮಾಜಿ ಸದಸ್ಯರಾದ ನವೀನ್, ರವಿಶಂಕರ್, ನಾಗೇಂದ್ರನಾಣಿ ಇತರರು ಪಾಲ್ಗೊಂಡಿದ್ದರು.