ಶಿವಗಂಗೆಯ ಗಂಗಾಧರೇಶ್ವರ ವಿಶೇಷ ಪೂಜೆ

| Published : Mar 09 2024, 01:31 AM IST

ಶಿವಗಂಗೆಯ ಗಂಗಾಧರೇಶ್ವರ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಮಹಾಶಿವರಾತ್ರಿ ಪ್ರಯುಕ್ತ ಶಿವಗಂಗೆಯಲ್ಲಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಶುಕ್ರವಾರ ಬೆಳಗಿನ ಜಾವ 4.40 ರಿಂದಲೇ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದಾಬಸ್‌ಪೇಟೆ: ಮಹಾಶಿವರಾತ್ರಿ ಪ್ರಯುಕ್ತ ಶಿವಗಂಗೆಯಲ್ಲಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಶುಕ್ರವಾರ ಬೆಳಗಿನ ಜಾವ 4.40 ರಿಂದಲೇ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತುಪ್ಪ ಸವರಿದರೆ ಬೆಣ್ಣೆಯಾಗುವ ವಿಸ್ಮಯ: ಶ್ರೀ ಗಂಗಾಧರೇಶ್ವರಸ್ವಾಮಿಯ ಲಿಂಗಕ್ಕೆ 5 ಗಂಟೆಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಆರಂಭಗೊಂಡು, ಶ್ರೀ ಗಂಗಾಧರೇಶ್ವರ ಸ್ವಾಮಿಯ ವಿಸ್ಮಯವೆಂದರೆ, ಈ ಗಂಗಾಧರೇಶ್ವರ ಸ್ವಾಮಿಯ ಲಿಂಗದ ಮೇಲೆ ತುಪ್ಪ ಸವರಿ, ಬೆಣ್ಣೆಯ ಸಂಗ್ರಹಿಸಿ ಭಕ್ತರು ಪ್ರಸಾದದ ರೂಪದಲ್ಲಿ ತೆಗೆದುಕೊಂಡು ಹೋಗಿ ಕಣ್ಣಿನ ರಪ್ಪೆಗಳ ಮೇಲೆ ಸವರಿಕೊಳ್ಳುವುದು, ಸ್ವಲ್ಪ ಸೇವಿಸುವುದು ಇಲ್ಲಿನ ಸಂಪ್ರದಾಯ.

ಶಿವರಾತ್ರಿಯ ಹಬ್ಬದ ಪ್ರಯುಕ್ತ ಭಕ್ತರು ಇಡೀ ದಿನ ಉಪವಾಸವಿದ್ದು, ರಾತ್ರಿಯೆಲ್ಲ ಜಾಗರಣೆ ಮಾಡಿಮರುದಿನ ಬೆಳಗಿನ ಜಾವ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಅಂತ್ಯಗೊಳಿಸುವುದು ಸಂಪ್ರದಾಯ. ಆದ್ದರಿಂದ ಶನಿವಾರವೂ ಸಹ ಗಂಗಾಧರೇಶ್ವರ ಸ್ವಾಮಿ ಮತ್ತು ಸ್ವರ್ಣಾಂಭ ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ.

ಶಿವಗಂಗೆಯಲ್ಲಿರುವ ಇತರೆ ಸ್ಥಳಗಳಾದ ನೊರೊಂದು ಲಿಂಗದ ಕಲ್ಯಾಣಿ, ವೀರಭ್ರ ದೇವಾಲಯ, ಹರಕೆ ಗಣೇಶ, ದೊಡ್ಡ ಕಲ್ಯಾಣಿ, ಮರಿಹೊನ್ನಮ್ಮ, ರಾಚೋಟಿ ವೀರಭದ್ರಸ್ವಾಮಿ, ಪಾತಾಳಗಂಗೆ ಮತ್ತು ಒಳಕಲ್ಲು ತೀರ್ಥ ಸೇರಿದಂತೆ ಹಲವು ತೀರ್ಥ ಸ್ಥಳಗಳಿಗೆ ಭೇಟಿ ನೀಡಿ ದರ್ಶನ ಪಡೆದು ಕೃತಾರ್ಥರಾದರು.ಪೋಟೋ 5 :

ಶಿವಗಂಗೆಯ ಶ್ರೀ ಗಂಗಾಧರೇಶ್ವರಸ್ವಾಮಿ ಲಿಂಗದ ವಿಶೇಷ ಅಲಂಕಾರ. ಪೋಟೋ 6 : ಶಿವರಾತ್ರಿ ಹಬ್ಬದಂದು ಶಿವಗಂಗೆಗೆ ಭೇಟಿ ನೀಡುತ್ತಿರುವ ಭಕ್ತರು.