ಕನ್ನಡಪ್ರಭ ವಾರ್ತೆ ನಿಪ್ಪಾಣಿ ಮಾದಕ ಪದಾರ್ಥ ಸಾಗಾಟ ಮಾಡುವಾಗ ಇಬ್ಬರು ಯುವಕರನ್ನು ಬಂಧಿಸಿರುವ ಶಹರ ಠಾಣೆ ಪೊಲೀಸರು ಅವರಿಂದ ₹ 5.30 ಲಕ್ಷ ಮೌಲ್ಯದ ಸುಮಾರು 10.6 ಕೆಜಿ ಗಾಂಜಾ ಮತ್ತು ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಸೊಲ್ಲಾಪೂರ ತೊಕಾವಾಡಿಯ ಇಸಾಕ ಮೌಲಾ ಮದರಖಾನ(20) ಹಾಗೂ ಸೊಲ್ಲಾಪೂರದ ಬಸವರಾಜ ಭಜಂತ್ರಿ(20) ಬಂಧಿತ ಯುವಕರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಮಾದಕ ಪದಾರ್ಥ ಸಾಗಾಟ ಮಾಡುವಾಗ ಇಬ್ಬರು ಯುವಕರನ್ನು ಬಂಧಿಸಿರುವ ಶಹರ ಠಾಣೆ ಪೊಲೀಸರು ಅವರಿಂದ ₹ 5.30 ಲಕ್ಷ ಮೌಲ್ಯದ ಸುಮಾರು 10.6 ಕೆಜಿ ಗಾಂಜಾ ಮತ್ತು ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಸೊಲ್ಲಾಪೂರ ತೊಕಾವಾಡಿಯ ಇಸಾಕ ಮೌಲಾ ಮದರಖಾನ(20) ಹಾಗೂ ಸೊಲ್ಲಾಪೂರದ ಬಸವರಾಜ ಭಜಂತ್ರಿ(20) ಬಂಧಿತ ಯುವಕರು.

ಖಚಿತ ಮಾಹಿತಿ ಆಧಾರದ ಮೇಲೆ ನಗರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೀಡಿ ಗೋದಾಮಿನ ಬಳಿ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಈ ಪ್ರಕರಣದಲ್ಲಿ ಎಸ್ಪಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್, ನಿಪ್ಪಾಣಿ ಸಿಪಿಐ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಸ್.ಎಂ.ಕಾರಜೋಳ ನೇತೃತ್ವದಲ್ಲಿ ಹೆಚ್ಚುವರಿ ಪಿಎಸ್ಐ ಎಸ್.ಎಸ್.ನರಸಪ್ಪನವರ ಹಾಗೂ ಸಿಬ್ಬಂದಿ ಗಸ್ತಿ, ಮಾಳಗೆ, ಕಲ್ಯಾಣಿ, ಸುದರ್ಶನ್ ಅಸ್ಕಿ, ಚಂದನಶಿವ, ನೇರಲಿ, ಕಳಾವಂತ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.