ಸಾರಾಂಶ
ವಿಶ್ವ ಹಿಂದೂ ಪರಿಷತ್ ಹಾಗೂ ಇಲ್ಲಿನ ಬಜರಂಗದಳದಿಂದ ಶುಕ್ರವಾರ ರಾತ್ರಿ ನಗರದ ಹಿಂದೂ ಮಹಾ ಗಣಪತಿಯ ಲಡ್ಡು ಪ್ರಸಾದದ ಹರಾಜು ಪ್ರಕ್ರಿಯೆ ನಡೆಸಿದ್ದು, ಈ ವೇಳೆ ಎನ್‌ಬಿಕೆ ಹಾಗೂ ಎನ್‌ಟಿಆರ್ ಅಭಿಮಾನಿ ಬಳಗದ ಮುಖಂಡ ಹಾಗೂ ಶಾಂತಿ ಮೆಡಿಕಲ್ ದೇವರಾಜ್ ಅವರು 1.8 ರುಗಳಿಗೆ ಹರಾಜು ಕೂಗುವ ಮೂಲಕ ಲಡ್ಡುಪ್ರಸಾದವನ್ನು ತಮ್ಮದಾಗಿಸಿಕೊಂಡರು.
ಕನ್ನಡಪ್ರಭ ವಾರ್ತೆ ಪಾವಗಡ
ವಿಶ್ವ ಹಿಂದೂ ಪರಿಷತ್ ಹಾಗೂ ಇಲ್ಲಿನ ಬಜರಂಗದಳದಿಂದ ಶುಕ್ರವಾರ ರಾತ್ರಿ ನಗರದ ಹಿಂದೂ ಮಹಾ ಗಣಪತಿಯ ಲಡ್ಡು ಪ್ರಸಾದದ ಹರಾಜು ಪ್ರಕ್ರಿಯೆ ನಡೆಸಿದ್ದು, ಈ ವೇಳೆ ಎನ್‌ಬಿಕೆ ಹಾಗೂ ಎನ್‌ಟಿಆರ್ ಅಭಿಮಾನಿ ಬಳಗದ ಮುಖಂಡ ಹಾಗೂ ಶಾಂತಿ ಮೆಡಿಕಲ್ ದೇವರಾಜ್ ಅವರು 1.8 ರುಗಳಿಗೆ ಹರಾಜು ಕೂಗುವ ಮೂಲಕ ಲಡ್ಡುಪ್ರಸಾದವನ್ನು ತಮ್ಮದಾಗಿಸಿಕೊಂಡರು.ಪಾವಗಡ ಪಟ್ಟಣದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಅತಿ ಎತ್ತರವಾದ ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಟಾಪಿಸಿದ್ದು ಇದೇ ಅ.6ರಂದು ಮಧ್ಯಾಹ್ನ ಅದ್ದೂರಿಯ ಮೆರವಣಿಗೆಯ ಮೂಲಕ ಹಿಂದೂ ಮಹಾ ಗಣಪತಿಯ ವಿರ್ಸಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ 1ಲಕ್ಷ ರು ಮೌಲ್ಯದ ಪಟಾಕಿ ಕೊಡಿಸಿಕೊಡುವ ಭರವಸೆ ವ್ಯಕ್ತಪಡಿಸಿದ ದೇವರಾಜ್, ಶಾಂತಿ ರೀತಿಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.