ಚಿಕ್ಕೋನಹಳ್ಳಿಯಲ್ಲಿ ಕೈತೋಟ ರಚನೆ ಕಾರ್ಯಕ್ರಮ

| Published : Nov 03 2025, 01:45 AM IST

ಸಾರಾಂಶ

ರೈತ ಸಮುದಾಯ ಹಿತ್ತಲ ಸಂಸ್ಸೃತಿಗೆ ಮತ್ತೆ ಮರಳಬೇಕು. ಮನೆ ಆವರಣದಲ್ಲಿ ತರಕಾರಿ ಬೆಳೆಸುವುದರ ಮೂಲಕ ಆರೋಗ್ಯಕರ ಆಹಾರ, ಸ್ವಚ್ಛ ಪರಿಸರ, ಹಾಗೂ ಆರ್ಥಿಕ ಉಳಿತಾಯ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಕಿಕ್ಕೇರಿ ವತಿಯಿಂದ ಕಸಬಾ ವಲಯದ ಚಿಕ್ಕೋನಹಳ್ಳಿ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದ ಅಂಗವಾಗಿ ಕೈತೋಟ ರಚನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕಿ ಗುಣಶ್ರೀ ಉದ್ಘಾಟಿಸಿ ಮಾತನಾಡಿ, ಹಿಂದೆ ನಮ್ಮ ರೈತ ಸಮುದಾಯ ಎಂದಿಗೂ ಕೈಚೀಲ ತೆಗೆದುಕೊಂಡು ಸೊಪ್ಪು ತರಕಾರಿಗಾಗಿ ಮಾರುಕಟ್ಟೆಗೆ ಹೋಗುತ್ತಿರಲಿಲ್ಲ. ತಮ್ಮ ಮನೆಗೆ ಅಗತ್ಯವಾದ ಸೊಪ್ಪು ತರಕಾರಿಗಳನ್ನು ತಮ್ಮ ಮನೆಯ ಹಿತ್ತಲಿನಲ್ಲಿಯೇ ಬೆಳೆಯುತ್ತಿದ್ದರು ಎಂದರು.

ಪ್ರತಿ ಮನೆಯ ಹಿತ್ತಲಿನಲ್ಲಿ ಬದನೆಕಾಯಿ, ಟೋಮ್ಯಾಟೋ, ಹೀರೆಕಾಯಿ, ಪಡವಲಕಾಯಿ ಮುಂತಾದ ತರಕಾರಿಗಳನ್ನು ಬೆಳೆಯುತ್ತಿದ್ದರು. ನಗರೀಕರಣದ ಪ್ರಭಾವಕ್ಕೆ ಒಳಗಾಗಿ ರೈತರ ಹಿತ್ತಲ ಸಂಸ್ಕೃತಿ ಮಾಯವಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಯಾವುದೇ ಆಹಾರ ಪದಾರ್ಥಗಳು ಇಂದು ಕೀಟನಾಶಕ, ಕಳೆ ನಾಶಕಗಳ ಸಿಂಪರಣೆಗೆ ಒಳಗಾಗಿದ್ದು ನಮ್ಮ ಬದುಕಿಗೆ ವಿಷ ಉಣಿಸುತ್ತಿವೆ ಎಂದರು.

ರೈತ ಸಮುದಾಯ ಹಿತ್ತಲ ಸಂಸ್ಸೃತಿಗೆ ಮತ್ತೆ ಮರಳಬೇಕು. ಮನೆ ಆವರಣದಲ್ಲಿ ತರಕಾರಿ ಬೆಳೆಸುವುದರ ಮೂಲಕ ಆರೋಗ್ಯಕರ ಆಹಾರ, ಸ್ವಚ್ಛ ಪರಿಸರ, ಹಾಗೂ ಆರ್ಥಿಕ ಉಳಿತಾಯ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಂದಿನಿ ಮಾತನಾಡಿ, ಕೈತೋಟವನ್ನು ರಚಿಸಿ ಮುಂದಿನ ಮೂರು ತಿಂಗಳಲ್ಲಿ ಯಾರು ಉತ್ತಮವಾಗಿ ಬೆಳೆ ಬೆಳೆದಿರುತ್ತಾರೋ ಅವರಿಗೆ ವಿಶೇಷ ಬಹುಮಾನವನ್ನೂ ನೀಡಲಾಗುವುದೆಂದು ಘೋಷಿಸಿದರು.

ಒಕ್ಕೂಟದ ಅಧ್ಯಕ್ಷೆ ಸುನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೇಬಿ, ಭಾಗ್ಯಮ್ಮ, ಸುನಿತಾ, ನೇತ್ರಾವತಿ ಸೇವಾ ಪ್ರತಿನಿಧಿ ಅನಿತಾ ಮತ್ತು ಹಲವು ಸದಸ್ಯರು ಉಪಸ್ಥಿತರಿದ್ದರು.

ನಾಳೆ ಕೃತಜ್ಞತಾ ಸಮಾವೇಶ ಎಂಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಿಗೆ ಅಭಿನಂದನೆ

ಮದ್ದೂರು:

ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನ.4ರಂದು ತಾಲೂಕು ಮತ್ತು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರಿಗೆ ಕೃತಜ್ಞತಾ ಸಮಾವೇಶ ಹಾಗೂ ಎಂಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.

ಮದ್ದೂರು ಹಾಗೂ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಅಂದು ಬೆಳಗ್ಗೆ 10.30ಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ, ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕಾರ್ಯಕ್ರಮ ನಡೆಯಲಿದೆ.

ಮದ್ದೂರು ಮತ್ತು ಭಾರತೀನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಎಲ್ಲಾ ಘಟಕಗಳ ಪದಾಧಿಕಾರಿಗಳು, ಮುಖಂಡರು, ಗ್ರಾಮ, ತಾಲೂಕು ಮತ್ತು ಜಿಪಂ ಸದಸ್ಯರು (ಹಾಲಿ, ಮಾಜಿ ಹಾಗೂ ಪರಾಜಿತರು), ಮಹಿಳಾ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು, ಸಹಕಾರ ಸಂಘಗಳ ನಿರ್ದೇಶಕರು, ಡೆಲಿಗೇಟ್ ಗಳು ಹಾಗೂ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮುಖಂಡರು, ಪದಾಧಿಕಾರಿಗಳು ಕೋರಿದ್ದಾರೆ.