ಕಡುವಿನಕೋಟೆ ಗ್ರಾಮಸ್ಥರಿಂದ ಗರುಡೋತ್ಸವ

| Published : Mar 13 2025, 12:45 AM IST

ಸಾರಾಂಶ

ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವೈಭವದ ಬ್ರಹ್ಮರಥೋತ್ಸವ ಪ್ರಯುಕ್ತ ಕಡುವಿನಕೋಟೆ ಗ್ರಾಮಸ್ಥರಿಂದ ಮಂಗಳವಾರ ರಾತ್ರಿ ೧೧ ಗಂಟೆಯಿಂದ ಶ್ರೀ ಗರುಡೋತ್ಸವ ಅದ್ಧೂರಿಯಾಗಿ ಜರುಗಿತು. ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಾಜಬೀದಿ ಉತ್ಸವ ಸಂಭ್ರಮ ಹಾಗೂ ವೈಭವದಿಂದ ಜರುಗಿತು. ನಂತರ ಪ್ರಾಕಾರೋತ್ಸವ ನೆರವೇರಿಸಿ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ತೀಥ ಪ್ರಸಾದ ವಿನಿಯೋಗ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವೈಭವದ ಬ್ರಹ್ಮರಥೋತ್ಸವ ಪ್ರಯುಕ್ತ ಕಡುವಿನಕೋಟೆ ಗ್ರಾಮಸ್ಥರಿಂದ ಮಂಗಳವಾರ ರಾತ್ರಿ ೧೧ ಗಂಟೆಯಿಂದ ಶ್ರೀ ಗರುಡೋತ್ಸವ ಅದ್ಧೂರಿಯಾಗಿ ಜರುಗಿತು.

ಮಂಗಳವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ತಧಿ ಆರಾಧನೆ ಸೇವೆ, ಸಹಸ್ರ ನಾಮಾರ್ಚನೆ, ಮಂಗಳಾರತಿ ನೆರವೇರಿಸಿ, ಪೂಜಿಸಲಾಯಿತು. ಸಂಜೆ ಗೋದೂಳಿ ಲಗ್ನದಲ್ಲಿ ಶ್ರೀ ಗರುಡ ದೇವರ ಮೂರ್ತಿಯ ಮೇಲೆ ಶ್ರೀಸ್ವಾಮಿಯ ಪರಿವಾರ ಸಮೇತ ಶ್ರೀಮನ್ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಾಜಬೀದಿ ಉತ್ಸವ ಸಂಭ್ರಮ ಹಾಗೂ ವೈಭವದಿಂದ ಜರುಗಿತು. ನಂತರ ಪ್ರಾಕಾರೋತ್ಸವ ನೆರವೇರಿಸಿ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ತೀಥ ಪ್ರಸಾದ ವಿನಿಯೋಗ ಮಾಡಲಾಯಿತು.

ತಾಲೂಕಿನ ಕಡುವಿನಕೋಟೆ ಗ್ರಾಮದ ದಿ. ಕೆಂಪೇಗೌಡರ ಕುಟುಂಬಸ್ಥರು, ದಿ. ಕೆ.ಎ.ಮರೀಗೌಡ (ನಿ.ಸ್ಕೂಲ್ ಮಾಸ್ಟರ್) ಕುಟುಂಬಸ್ಥರು, ದಿ. ಜವರೇಗೌಡರ ಕುಟುಂಬಸ್ಥರು, ಬ್ಯಾಂಕ್ ದೇವರಾಜಪ್ಪ ಹಾಗೂ ಕುಟುಂಬಸ್ಥರು, ಸುಬ್ಬಣ್ಣ ಹಾಗೂ ಕುಟುಂಬಸ್ಥರು, ದೊಡ್ಡಣ್ಣ ಹಾಗೂ ಕುಟುಂಬಸ್ಥರು, ಗುಲಾಬಿ ಮಂಜು, ಪ್ರಸಾದ್, ನಂದೀಶ ಹಾಗೂ ಕಡುವಿನಕೋಟೆ ಗ್ರಾಮಸ್ಥರ ಸೇವಾರ್ಥದಲ್ಲಿ ಶ್ರೀ ಗರುಡೋತ್ಸವ ಅತ್ಯಂತ ವೈಭವದಿಂದ ಜರುಗಿತು.

ಹಿರಿಯ ಅರ್ಚಕ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅಕ್ಕಿಹೆಬ್ಬಾಳು ಶ್ರೀಧರ್ ನೇತೃತ್ವದಲ್ಲಿ ನಾರಾಯಣಭಟ್ಟರು, ರಾಮ ಪ್ರಸಾದ್, ಸಿಂಹಾದ್ರಿ ನರಸಿಂಹನ್ ಹಾಗೂ ಇತರರು ಪೂಜಾ ಕೈಂಕರ್ಯ ನೆರವೇರಿಸಿದರು.