ಸಾರಾಂಶ
ಪುರಾತನ ಕಾಲದಿಂದಲೂ ಅಯುರ್ವೆದ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. ಈಗಿನ ಹಾಗೆ ಮೂದಲಿನ ಕಾಲದಲ್ಲಿ ಆಸ್ಪತ್ರೆಗಳು ಇರಲಿಲ್ಲ. ಜನರು ನಾಟಿ ವೈದ್ಯರನ್ನೇ ಅವಲಂಬಿಸಿದ್ದರು ಎಂದು ಐ.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭ
ಪುರಾತನ ಕಾಲದಿಂದಲೂ ಅಯುರ್ವೆದ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. ಈಗಿನ ಹಾಗೆ ಮೂದಲಿನ ಕಾಲದಲ್ಲಿ ಆಸ್ಪತ್ರೆಗಳು ಇರಲಿಲ್ಲ. ಜನರು ನಾಟಿ ವೈದ್ಯರನ್ನೇ ಅವಲಂಬಿಸಿದ್ದರು ಎಂದು ಐ.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ ಹೇಳಿದರು.ಶುಕ್ರವಾರ ಇಲ್ಲಿನ ಜೆ.ಜಿ ಕೊ-ಆಫ್ ಆಸ್ಪತ್ರೆಯ ಅಂಗ ಸಂಸ್ಥೆ ಮಹರ್ಷಿ ಬಿ.ಎ.ಪಾಟೀಲ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಆಯುರ್ವೆದ ಮೇಡಿಕಲ್ ವಿದ್ಯಾರ್ಥಿಗಳಿಗೆ ಬಿ.ಎ.ಎಂ.ಎಸ್ ಪ್ರಮಾಣ ಪತ್ರ ವಿತರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಆಯುರ್ವೆದ ಈಗ ಹೆಚ್ಚಿನ ಮಾನ್ಯತೆ ಪಡೆದಿದೆ. ಇದೊಂದು ವ್ಯಯಕ್ತಿಕ ಉದ್ಯೋಗದ ಮಾರ್ಗವೂ ಆಗಿದೆ. ವೈದ್ಯರಾದ ತಾವು ಸರ್ಕಾರಿ ಕೆಲಸಕ್ಕೆ ಸೇರಲಿ ಅಥವಾ ಸ್ವಂತ ಆಸ್ಪತ್ರೆ ತೆರೆಯಲಿ ಇಲ್ಲಿ ತೆಗೆದುಕೊಂಡ ಪ್ರತಿಜ್ಞಾ ವಿಧಿ ಪ್ರಕಾರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಕಲಿತ ಸಂಸ್ಥೆ ಹಾಗೂ ತಂದೆ-ತಾಯಿಗೆ ಕೀರ್ತಿ ತರಬೇಕೆಂದರು.
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಅಪ್ಪಯ್ಯ ಬಡಕುಂದ್ರಿ, ಸಂಸ್ಥೆಯ ಸಿ.ಇ,ಒ. ಡಾ ಬಿ.ಕೆ.ಎಚ್. ಪಾಟೀಲ. ನಿರ್ದೇಶಕರಾದ ಸಿ.ಎ. ಕಾಡದವರ, ಎ.ಎ. ಕರಲಿಂಗನವರ, ಎಂ.ಎ. ಪಾಟೀಲ, ಸಿ.ಬಿ. ಸನದಿ, ಎಸ್.ಎಸ್. ದಳವಾಯಿ, ಎ.ಬಿ. ತಳವಾರ, ಸಂಸ್ಥೆಯ ಅನೇಕ ಗಣ್ಯರು ಇದ್ದರು. ನೂರಾರು ಜನ ವಿದ್ಯಾರ್ಥಿಗಳ ಪಾಲಕರು ಆಗಮಿಸಿದ್ದರು.ಸಂಸ್ಥೆಯ ಸಿಇಒ. ಡಾ.ಬಿ.ಕೆ.ಎಚ್ ಪಾಟೀಲ ಪರಿಚಯಸಿದರು. ಆಯುರ್ವೆದ ಮೇಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ಕೆ. ಶರ್ಮಾ ಸಂಸ್ಥೆಯ ಕುರಿತು ಮಾತನಾಡಿದರು. ಪ್ರೊ.ಡಾ.ಎಸ್.ಬಿ. ಚೌಗಲೆ ಸ್ವಾಗತಿಸಿದರು. ಡಾ.ಶಶಿಕಲಾ ಹೊಸಮಠ ಪತಿಜ್ಞಾ ವಿಧಿ ಬೋಧಿಸಿದರು, ಪ್ರೊ.ಡಾ.ಜಿ.ಕೆ. ಶರ್ಮಾ ವಂದಿಸಿದರು.