ಸಿರಿಧಾನ್ಯ ನಡಿಗೆಗೆ ಗವಿಶ್ರೀ ಚಾಲನೆ

| Published : Nov 28 2024, 12:33 AM IST

ಸಾರಾಂಶ

ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಚಾಲನೆ ನೀಡಿದರು.

ಸಿರಿಧಾನ್ಯಗಳಿಂದ ಆರೋಗ್ಯ ಸದೃಢ: ರುದ್ರೇಶಪ್ಪ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಚಾಲನೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಸಿರಿಧಾನ್ಯದಿಂದ ಆರೋಗ್ಯ ಸದೃಢ್ಯವಾಗುತ್ತದೆ. ಈ ದಿಸೆಯಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದರು. ಸಿರಿಧಾನ್ಯ ಬೆಳೆದ ರೈತರಿಗೆ ರೈತ ಸಿರಿ ಯೋಜನೆ ಮೂಲಕ ರೈತರಿಗೆ ₹೧೦ ಸಾವಿರ ನಗದನ್ನು ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ. ಜೊತೆಗೆ ಸಿರಿಧಾನ್ಯ ಕ್ಷೇತ್ರವನ್ನು ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು.

ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ. ಯೋಗಿನಿ ಮಾತನಾಡಿ, ನಮ್ಮ ಆಹಾರ ಪದ್ದತಿಯಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಆಹಾರ ಪದ್ದತಿಯಲ್ಲಿ ಅವುಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಆರೋಗ್ಯ ಸದೃಢವಾಗಲಿದೆ. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಆಧ್ಯಾತ್ಮ ಮಾಡುವುದರಿಂದ ನಮ್ಮ ಮನಸ್ಸಿನ ಏಕಾಗ್ರತೆಯೂ ಸದೃಢವಾಗಲಿದೆ ಎಂದರು.

ಜಾಥಾದಲ್ಲಿ ಕೃಷಿ ಇಲಾಖೆಯ ಡಿಡಿಎ ಸಿದ್ದೇಶ, ವಿವಿಧ ತಾಲೂಕಿನ ಎಡಿಗಳಾದ ಗಂಗಾವತಿಯ ಸಂತೋಷ, ಯಲಬುರ್ಗಾ ತಾಲೂಕಿನ ಪ್ರಮೋದ ಕೊಪ್ಪಳದ ಜೀವನಸಾಬ, ಕುಷ್ಟಗಿಯ ಅಜ್ಮೀರ್ ಅಲಿ, ಐಐಟಿ ಕಾರ್ಯದರ್ಶಿ ವೀರಣ್ಣ ಕಮತರ, ಆತ್ಮ ಯೋಜನೆಯ ಸಿಬ್ಬಂದಿ, ಕೃಷಿ ಸಂಜೀವನಿ ಯೋಜನೆಯ ಸಿಬ್ಬಂದಿ, ಕೃಷಿ ಸಖಿ ಮತ್ತು ಪಶು ಸಖಿ ಸಿಬ್ಬಂದಿ ಸೇರಿ ಇತರರು ಪಾಲ್ಗೊಂಡಿದ್ದರು. ಗವಿಮಠದಿಂದ ಆರಂಭವಾದ ಜಾಥಾವು ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತದಲ್ಲಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ೩೫೦ಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಿರಿಧಾನ್ಯಗಳ ಕುರಿತು ಜಾಗೃತಿಯ ಮಾಹಿತಿ ಪ್ರಚಾರ ಮಾಡಿದರು.