ಮಹಾಲಿಂಗಪುರ ಜನತೆಯ ಅಧ್ಯಾತ್ಮ ಆಸಕ್ತಿಗೆ ಗವಿಸಿದ್ಧೇಶ್ವರ ಶ್ರೀ ಮೆಚ್ಚುಗೆ

| Published : Jul 06 2025, 01:53 AM IST

ಮಹಾಲಿಂಗಪುರ ಜನತೆಯ ಅಧ್ಯಾತ್ಮ ಆಸಕ್ತಿಗೆ ಗವಿಸಿದ್ಧೇಶ್ವರ ಶ್ರೀ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ಜನ ನಿಜವಾಗಲೂ ಅಧ್ಯಾತ್ಮಿಕ ಮನೋಭಾವ ಹೊಂದಿದ್ದಾರೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ಜನ ನಿಜವಾಗಲೂ ಅಧ್ಯಾತ್ಮಿಕ ಮನೋಭಾವ ಹೊಂದಿದ್ದಾರೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಕೊಪ್ಪಳದ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದು ಬರುವ ದಿನಗಳಲ್ಲಿ ಮಹಾಲಿಂಗಪುರ ಪಟ್ಟಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಸಿಕೊಡಲು ಶ್ರೀಗಳನ್ನು ಕೋರಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು ದಿನಾಂಕ ಹೊಂದಾಣಿಕೆ ಮಾಡಿಕೊಂಡು ೧೦ ರಿಂದ ೧೧ ದಿವಸಗಳ ಪ್ರವಚನ ನೀಡಲು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

ಈ ವೇಳೆ ಶ್ರೀಗಳು ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದರೆ ನೆಮ್ಮದಿ ನೆಲೆಸುತ್ತದೆ. ಮಹಾಲಿಂಗಪುರ ಪಟ್ಟಣದ ನೂರಾರು ಜನ ಪ್ರವಚನದ ಆಹ್ವಾನ ನೀಡಲು ಮಠಕ್ಕೆ ಬಂದಿರುವುದನ್ನು ಕಂಡು ಶ್ರೀಗಳು ಹರ್ಷ ವ್ಯಕ್ತಪಡಿಸಿ, ಆಶೀರ್ವದಿಸಿದರು.

ಶ್ರೀಗಳ ಭೇಟಿಗೆ ಪಟ್ಟಣದಿಂದ ೨೮ ವಾಹನಗಳಲ್ಲಿ ಸುಮಾರು ೧೫೦ ಜನ ತೆರಳಿದ್ದರು.

ಮಹಾಲಿಂಗಪ್ಪ ಕೋಳಿಗುಡ್ಡ, ಎಸ್.ಬಿ. ಉಳ್ಳಾಗಡ್ಡಿ, ಮಲ್ಲಪ್ಪ ಭಾವಿಕಟ್ಟಿ, ಮಹಾಲಿಂಗಪ್ಪ ಲಾತೂರ, ಅಶೋಕ ಅಂಗಡಿ, ಪ್ರಭು ಬೆಳಗಲಿ, ಜಿ.ಎಸ್. ಗೊಂಬಿ, ಶಿವಾನಂದ ಮಾಲಬಸರಿ, ಚಂದ್ರಶೇಖರ ಗೊಂದಿ, ಚನಬಸು ಯರಗಟ್ಟಿ, ಪ್ರಕಾಶ ಮಮದಾಪೂರ, ನಜೀರ್ ಅತ್ತಾರ, ವಿಠ್ಠಲ ಸಂಶಿ, ಗುರುಪಾದ ಅಂಬಿ, ಸತ್ಯಪ್ಪ ಹುದ್ದಾರ, ಹಣಮಂತ ಬಡಿಗೇರ, ಮೇಹಬೂಬ ಜೀರಗಾಳ, ಮಲ್ಲು ಯರಡ್ಡಿ, ಅಣ್ಣೇಶಗೌಡ ಉಳ್ಳಾಗಡ್ಡಿ, ಹಣ್ಮಂತ ಶಿರೋಳ, ಶಿವಲಿಂಗ ಟಿರಕಿ, ನಬಿ ಯಕ್ಸಂಬಿ, ಶಂಕರ ಕೋಳಿಗುಡ್ಡ, ರಮೇಶ ಗೋಲಭಾವಿ, ಚೆನ್ನಪ್ಪ ಪಟ್ಟಣಶೆಟ್ಟಿ, ಪ್ರಕಾಶ ತಾಳಿಕೋಟಿ, ಅಲ್ಲಪ್ಪ ಕಲ್ಲೋಳಿ, ಸಿರಾಜ್ ಪೆಂಡಾರಿ, ಬಸವರಾಜ ನಿಂಬರಗಿ, ಸಂಗಪ್ಪ ಉಪ್ಪಲದಿನ್ನಿ, ಅಜಯ ಹಂದ್ರಾಳ,ರಝಾಕ್ ಜಮಖಂಡಿ ಸೇರಿದಂತೆ ಪಟ್ಟಣದ ಎಲ್ಲ ಸಮಾಜದ ಜನರ ಜೊತೆಗೆ ಮುಸ್ಲಿಂ ಸಮುದಾಯದ ಜನರು ಉಪಸ್ಥಿತರಿದ್ದರು.