ಸಾರಾಂಶ
ಔರಾದ್ : ಕ್ಷೇತ್ರದ ಶಾಸಕ ಪ್ರಭು ಬಿ.ಚವ್ಹಾಣ ಅವರ ಜನ್ಮದಿನದ ನಿಮಿತ್ತ ಅಭಿಮಾನಿಗಳ ಬಳಗದಿಂದ ಜುಲೈ 6 ರಂದು ಪೂಜೆ, ಸಸಿ ನೆಡುವುದು, ರಕ್ತದಾನ ಶಿಬಿರದಂತಹ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಶಾಸಕರು ಅಂದು ಬೆಳಗ್ಗೆ 6 ಗಂಟೆಯಿಂದ ಘಮಸುಬಾಯಿ ತಾಂಡಾದಲ್ಲಿರುವ ಇಚ್ಚಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಹೋಮ-ಹವನಗಳಲ್ಲಿ ಭಾಗವಹಿಸುವರು.
ಬೆಳಿಗ್ಗೆ 8.30ಕ್ಕೆ ಔರಾದ್‌ನ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸುವರು. ನಂತರ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಗೋ ಪೂಜೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವರು. 10 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯುತ್ತದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಪೂಜ್ಯ ಗುರುಬಸವ ಪಟ್ಟದೇವರು, ಪೂಜ್ಯ ಶಿವಾನಂದ ಶಿವಾಚಾರ್ಯರು ತಮಲೂರು, ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಢೋಣಗಾಂವ, ಪೂಜ್ಯ ಶಿವಲಿಂಗ ಶಿವಾಚಾರ್ಯರು ಹೆಡಗಾಪೂರ, ಪೂಜ್ಯ ಚಂದ್ರಶೇಖರ ಶಿಚಾಚಾರ್ಯರು ಗುಡಪಳ್ಳಿ, ಪೂಜ್ಯ ಝಾಪಾ ಮಹಾರಾಜ, ಪೂಜ್ಯ ಮುರುಳಿ ಮಹಾರಾಜ, ಪೂಜ್ಯ ಗೋವಿಂದ ಮಹಾರಾಜರು ಸೇರಿದಂತೆ ಇನ್ನಿತರೆ ಪೂಜ್ಯರು ಹಾಗೂ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಶಾಸಕರ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ತಾಯಿಯ ಹೆಸರಲ್ಲಿ ಒಂದು ಗಿಡ’ ಆಶಯದಂತೆ ಅಭಿಮಾನಿಗಳು, ಕಾರ್ಯ ಕರ್ತರು ಹಾಗೂ ಹಿತೈಶಿಗಳಿಂದ ಕ್ಷೇತ್ರದಾದ್ಯಂತ ಸಾವಿರಾರು ಸಸಿಗಳನ್ನು ನೆಡಲಾಗುತ್ತಿದೆ.
ಆದ್ದರಿಂದ ಎಲ್ಲ ಅಭಿಮಾನಿಗಳು, ಹಿತೈಷಿಗಳು, ಮುಖಂಡರು, ಕರ್ಯಳರ್ತಾರು ಹಾಗೂ ಸರ್ವಜಜನಿಕರು ಜುಲೈ 6ರಂದು ಔರಾದ(ಬಿ) ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಜರುಗಲಿರುವ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.