ಶ್ರೀ ಕುಕ್ಕುವಾಡೇಶ್ವರಿ ದರ್ಶನ ಪಡೆದ ಗಾಯತ್ರಿ ಸಿದ್ದೇಶ್ವರ

| Published : Apr 19 2024, 01:01 AM IST

ಶ್ರೀ ಕುಕ್ಕುವಾಡೇಶ್ವರಿ ದರ್ಶನ ಪಡೆದ ಗಾಯತ್ರಿ ಸಿದ್ದೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲೂಕಿನ ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಏ.19ರಂದು ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸುವ ಮುನ್ನಾ ದಿನವಾದ ಗುರುವಾರ ವಿವಿಧ ದೇವಸ್ಥಾನಗಳು, ಮಠಗಳಿಗೆ ಭೇಟಿ ನೀಡಿ, ಮಠಾಧೀಶರ ಆಶೀರ್ವಾದ ಪಡೆದರು.

ಚನ್ನಗಿರಿ ತಾಲೂಕಿನ ಹಾಲಸ್ವಾಮಿ ವಿರಕ್ತ ಮಠಕ್ಕೆ ಭೇಟಿ ನೀಡಿದ್ದ ಗಾಯತ್ರಿ ಸಿದ್ದೇಶ್ವರ ಡಾ.ಬಸವ ಜಯಚಂದ್ರ ಸ್ವಾಮೀಜಿ, ನಂತರ ಅದೇ ತಾಲೂಕಿನ ಕೇದಾರ ಮಠಕ್ಕೆ ತೆರಳಿ, ಶ್ರೀ ಶಾಂತವೀರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಅಮ್ಮನ ಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರಸಿದ್ಧ ಶ್ರೀ ವಿಜಯ ಗಣಪತಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಘ್ನ ನಿವಾರಕನ ಗಣೇಶನ ದರ್ಶನ ಮಾಡಿ, ಆಶೀರ್ವಾದ ಪಡೆದರು. ವಿವಿಧ ದೇವಸ್ಥಾನಗಳು, ಮಠಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಏ.19ರಂದು ಮತ್ತೊಮ್ಮೆ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.

ನಮ್ಮ ಪಕ್ಷದ ಹಿರಿಯ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕರು ನಾಮಪತ್ರ ಸಲ್ಲಿಕೆಯ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುವರು. ಸಾಗರೋಪಾದಿಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಭಾಗವಹಿಸುವರು. ಈಗಾಗಲೇ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎಲ್ಲಾ 8 ವಿಧಾನಸಭಾ ಕ್ಷೇತ್ರ

ಗಳ ನೂರಾರು ಹಳ್ಳಿಗಳಿಗೆ ಭೇಟಿ ನೀಡಿ, ಮತಯಾಚಿಸಿದದ್ದೇನೆ. 2ನೇ ಸುತ್ತಿನಲ್ಲಿ ಎಲ್ಲಾ ಗ್ರಾಮಗಳಿಗೂ ಖುದ್ದು ಭೇಟಿ ನೀಡಿ, ಮತಯಾಚಿಸುವೆ ಎಂದು ತಿಳಿಸಿದರು.

ಪ್ರಚಾರಕ್ಕೆ ನಾವು ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಳ್ಳದ ಸಾರ್ವಜನಿಕರು, ವಿದ್ಯಾರ್ಥಿ, ಯುವ ಜನರು, ಮಹಿಳೆಯರು, ರೈತರು ಹೀಗೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಸ್ಪಂದಿಸುವ ಮೂಲಕ ನಮಗೆ ಶುಭ ಸೂಚನೆ ನೀಡುತ್ತಿದ್ದು, ಇದು ಎಲ್ಲರೂ ನೀಡುತ್ತಿರುವ ಗೆಲುವಿನ ಸೂಚನೆಯೆಂದೇ ನಾವು ಭಾವಿಸುತ್ತೇವೆ. ನಮ್ಮ ಮಾವನವರಾದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ತಮ್ಮ ಪತಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕೈಗೊಂಡ ಅಭಿವೃದ್ಧಿ ಕಾರ್ಯ, ಜನಪರ ಕಾಳಜಿ, ಪ್ರಧಾನಿ ನರೇಂದ್ರ ಮೋದಿ ಆಡಳಿತ, ಯಡಿಯೂರಪ್ಪನವರು ದಾವಣಗೆರೆ ನೀಡಿದ ಕೊಡುಗೆಗಳು ನನಗೆ ಶ್ರೀರಕ್ಷೆಯಾಗಿವೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಗೆಲುವು ಖಚಿತ ಎಂದು ಹೇಳಿದರು.

ಮುಖಂಡರಾದ ಕಮಲಾ ನಿರಾಣಿ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ, ಬಿಜೆಪಿ ಮುಖಂಡರಾದ ನಾಗರಾಜ, ಗುರುಸಿದ್ದಯ್ಯ, ಕಮಲಾ, ಹರೀಶ, ಸವಿತಾ ರಘು, ಮಹೇಶ ಜವಳಿ, ಧನಂಜಯ ಅಜ್ಜಿಹಳ್ಳಿ, ಚಂದ್ರಯ್ಯ, ಪ್ರೇಮಾ ನಟರಾಜ, ಗಾಯತ್ರಿ ಸುಭಾಷ್, ಸುನಂದಮ್ಮ, ಎಚ್.ಸಿ.ಜಯಮ್ಮ, ಅಂಬುಜಾ ನಾಗರಾಜ, ಕೃತಿಕಾ, ತೇಜಸ್ವಿನಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.