ಸಾರಾಂಶ
ಔರಾದ್ ಪಟ್ಟಣದ ಶಿಕ್ಷಕರ ಕಾಲೋನಿ, ರಾಗಾ ಗಲ್ಲಿ, ಶೆಟಕಾರ ಗಲ್ಲಿ, ಖೂಬಾ ಗಲ್ಲಿ, ಸಂತೋಷ ಕಾಲೊನಿ, ಅಂಬಿಕಾ ಕಾಲೊನಿ, ಗೌಂಡಿ ಗಲ್ಲಿ ಸೇರಿದಂತೆ ಎಲ್ಲ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
ಕನ್ನಡಪ್ರಭ ವಾರ್ತೆ ಔರಾದ್
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ತಾಯಿ ಡಾ.ಗೀತಾ ಈಶ್ವರ ಖಂಡ್ರೆ ಬುಧವಾರ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.ಪಟ್ಟಣದ ಶಿಕ್ಷಕರ ಕಾಲೋನಿ, ರಾಗಾ ಗಲ್ಲಿ, ಶೆಟಕಾರ ಗಲ್ಲಿ, ಖೂಬಾ ಗಲ್ಲಿ, ಸಂತೋಷ ಕಾಲೊನಿ, ಅಂಬಿಕಾ ಕಾಲೊನಿ, ಗೌಂಡಿ ಗಲ್ಲಿ ಸೇರಿ ಎಲ್ಲ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
ಬಳಿಕ ಮಾತನಾಡಿ ಅವರು, ಸಾಗರ ಖಂಡ್ರೆ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಜಿಲ್ಲೆ ಅಭಿವೃದ್ಧಿಗೆ ಅವರಲ್ಲಿ ಹಲವಾರು ಯೋಜನೆಗಳಿವೆ. 5 ವರ್ಷಗಳ ಅವಧಿಗೆ ಅವರನ್ನು ಆರಿಸಿ ಜನರ ಸೇವೆಗೆ ಒಂದು ಅವಕಾಶ ಮಾಡಿಕೊಡಬೇಕು ಎಂದರು.ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಜೀವನ ಸುಗಮಗೊಳಿಸಲು ಪಂಚ ಯೋಜನೆ ಗ್ಯಾರಂಟಿಗಳು ಜಾರಿಯಾಗಲಿವೆ. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಪಾಲುದಾರಿಕೆ ನ್ಯಾಯ ಎಂಬ 5 ನ್ಯಾಯಗಳಿಂದ ೨೫ ಗ್ಯಾರಂಟಿ ಭರವಸೆ ಕಾಂಗ್ರೆಸ್ ಪಕ್ಷ ನೀಡಿದೆ ಎಂದರು.
ಈ ಸಂದರ್ಭದಲ್ಲಿ ರಾಜಕುಮಾರ ಹಲಬರ್ಗೆ, ರತ್ನಾ ಪಾಟೀಲ್, ವಿಜಯಲಕ್ಷ್ಮಿ ಗುದಗೆ, ಲಕ್ಷ್ಮಿ ಮಜಿಗೆ, ಶೋಭಾ ಭೂಮೆ, ರ್ಯಾ ಭೂಮೆ, ಸಂತೋಷಿ ಮರಕಟ್ಟೆ, ಶಿವರಾಜ ದೇಶಮುಖ, ರಾಮಣ್ಣ ವಡಿಯಾರ್, ಚನ್ನಪ್ಪ ಉಪ್ಪೆ, ಸುನಿಲಕುಮಾರ ದೇಶಮುಖ, ಶರಣಪ್ಪ ಪಾಟೀಲ್, ಅನಿಲ ನರ್ಮಶಳೆ, ಡಾ. ಫೈಯಾಜ್ ಅಲೀ, ಮಹೇಶ ಫುಲಾರಿ, ದತ್ತಾತ್ರೇ ಬಾಪುರೆ, ಶಿವು ಕಾಂಬಳೆ ಸೇರಿದಂತೆ ಅನೇಕರಿದ್ದರು.