ತರಳಬಾಳು ಶ್ರೀಗಳ ಆಶೀರ್ವಾದ ಪಡೆದ ಗೀತಾ

| Published : Apr 29 2024, 01:34 AM IST

ಸಾರಾಂಶ

ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭಾನುವಾರ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಭೇಟಿ ಮಾಡಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು.

ಸಿರಿಗೆರೆ: ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭಾನುವಾರ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಭೇಟಿ ಮಾಡಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು.

ಐಕ್ಯಮಂಟಪಕ್ಕೆ ತೆರಳಿ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಶಾಂತೇಶ್ವರ ಸ್ವಾಮೀಜಿ ಕರ್ತೃಗದ್ದಿಗೆಗೆ ಪುಷ್ಪನಮನ ಸಲ್ಲಿಸಿದರು.

ಶ್ರೀಗಳು ೧೯೮೨ರಲ್ಲಿ ಡಾ.ರಾಜಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರು ಸಿರಿಗೆರೆ ಭೇಟಿ ಮಾಡಿದ್ದ ದಿನಗಳನ್ನು ಹಾಗೂ ಬಂಗಾರಪ್ಪನವರು ಶಿವಮೊಗ್ಗದಲ್ಲಿ ಒಟ್ಟಿಗೆ ಶಿಕ್ಷಣ ಪಡೆದ ಕ್ಷಣಗಳನ್ನು ಮೆಲುಕು ಹಾಕಿದರು.

ಪಕ್ಷಾತೀತ ಮಠ ಎಲ್ಲರಿಗೂ ಮಾರ್ಗದರ್ಶನ ಮಾಡತ್ತೇವೆ. ದೇಶದಲ್ಲಿ ಪಕ್ಷಾತೀತ ನಿಷೇಧವಾಗಬೇಕು. ದೇಶ ಹಾಗೂ ರಾಜ್ಯದಲ್ಲಿ ಒಂದೇ ಸಲ ಚುನಾವಣೆ ಆಗಬೇಕಿದೆ. ಜಿಪಂ, ತಾಪಂ, ಗ್ರಾಪಂ ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಒಬ್ಬ ರಾಜಕಾರಣಿ ಒಂದು ಪಕ್ಷದಲ್ಲಿ ಸತತವಾಗಿ ೫ ವರ್ಷ ಇದ್ದರೆ ಮಾತ್ರ ಅವನಿಗೆ ಪಕ್ಷದಿಂದ ಟಿಕೆಟ್ ನೀಡಬೇಕು. ಪದೇ ಪದೇ ಪಕ್ಷ ಬದಲಾಯಿಸಲು ಅವಕಾಶ ನೀಡಬಾರದು ಹಾಗೂ ಎಂದರು.

ಬಂಗಾರಪ್ಪನವರು ರೈತರಿಗೆ ಉಚಿತ ಪಂಪ್‌ಸೆಟ್, ಉಚಿತ ವಿದ್ಯುತ್, ಗ್ರಾಮೀಣ ಬಡವರಿಗೆ ಆಶ್ರಯ ಯೋಜನೆಗಳನ್ನು ನೀಡಿದ್ದರು. ಇಂಥ ಯೋಜನೆಗಳು ಜಾರಿಯಾಗಬೇಕಿದೆ. ಮಧು ಬಂಗಾರಪ್ಪನವರು ೨೦೧೯ರಲ್ಲಿ ಪಾದಯಾತ್ರೆ ಮಾಡಿ ಏತ ನೀರಾವರಿ ಮೂಲಕ ಪುಟ್ಟಕೆರೆಗೆ ನೀರು ತಂದಿದ್ದಾರೆ. ಸಿರಿಗೆರೆ ಮಠದ ಹಾಗೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಬೇಕಿದೆ ಎಂದು ಜೊತೆಗಿದ್ದ ಅಲ್ಲಿನ ಜನರು ಹೇಳಿದರು.

ಗೀತಾ ಮಾತನಾಡಿ, ಶ್ರೀಗಳನ್ನು ನೋಡಿದ ಮೇಲೆ ದೇವರನ್ನೇ ನೋಡಿದಂತಾಯಿತು. ಸಿರಿಗೆರೆ ಮಠದಂತೆ ಶಕ್ತಿಧಾಮದಲ್ಲಿ ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಇನ್ನಿತರೆ ಕಡೆಗಳಿಂದ ಬಂದು ನೆಲೆಸಿರುವ ಸುಮಾರು ೨೦೦ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟದ ಸೌಲಭ್ಯ ಕಲ್ಪಿಸಿದ್ದೇವೆ. ಫೋಟೋ ಗ್ಯಾಲರಿ ವೀಕ್ಷಿಸಿ ತಂದೆಯವರು, ಮಾವನವರು ಶ್ರೀಮಠದೊಂದಿಗೆ ಹೊಂದಿದ್ದ ಸಂಬಂಧ ತಿಳಿಯಿತು. ನೀವು ಮಾಡುತ್ತಿರುವ ಕೆಲಸಗಳಲ್ಲಿ ಅಲ್ಪ ಕೆಲಸಗಳನ್ನಾದರೂ ಸಹ ನಾವು ಮಾಡಲು ನಿಮ್ಮ ಆಶೀರ್ವಾದ ಮುಖ್ಯ ಎಂದರು.

ಸಿರಿಗೆರೆಯ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಬೆಲ್ಲದ್, ಚೇತನ್, ಸಿರಿ, ತಿಪ್ಪೇಶ್, ವಾಲ್ಮಿಕಿ, ಮಧು ಹಾಗೂ ಅಪಾರ ಅಭಿಮಾನಿಗಳು ಇದ್ದರು.