ಇಂಡಿ ಲಿಂಬೆಗೆ ಜಿಯೋಗ್ರಾಫಿಕಲ್‌ ಐಡೆಂಟಿಫಿಕೇಷನ್

| Published : Mar 07 2024, 01:50 AM IST

ಇಂಡಿ ಲಿಂಬೆಗೆ ಜಿಯೋಗ್ರಾಫಿಕಲ್‌ ಐಡೆಂಟಿಫಿಕೇಷನ್
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ: ಇತಿಹಾಸದಲ್ಲಿ ಇಂಡಿಯ ಹೆಸರು ಬೆಳಗಲಿ ಎಂಬ ಉದ್ದೇಶದಿಂದ ಇಂಡಿ ಲಿಂಬೆ ಹೆಸರನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಭೌಗೋಳಿಕ ಮಾನ್ಯತೆ ದೊರಕಿಸಿ ಕೊಡಲಾಗಿದೆ. ಜಲಧಾರೆ ಯೋಜನೆ ಮೂಲಕ ಮುಂದಿನ ಎರಡು ವರ್ಷದಲ್ಲಿ ಪ್ರತಿ ಗ್ರಾಮಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಬರಲಿದ್ದು, ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇತಿಹಾಸದಲ್ಲಿ ಇಂಡಿಯ ಹೆಸರು ಬೆಳಗಲಿ ಎಂಬ ಉದ್ದೇಶದಿಂದ ಇಂಡಿ ಲಿಂಬೆ ಹೆಸರನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಭೌಗೋಳಿಕ ಮಾನ್ಯತೆ ದೊರಕಿಸಿ ಕೊಡಲಾಗಿದೆ. ಜಲಧಾರೆ ಯೋಜನೆ ಮೂಲಕ ಮುಂದಿನ ಎರಡು ವರ್ಷದಲ್ಲಿ ಪ್ರತಿ ಗ್ರಾಮಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಬರಲಿದ್ದು, ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ ಅಮರ ಇಂಟರ್‌ ನ್ಯಾಷನಲ್‌ ಹೊಟೇಲ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ₹137 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಎಲ್ಲ ಸಮುದಾಯದವರನ್ನು ಪ್ರೀತಿಸುವುದಕ್ಕಾಗಿ ಸಮುದಾಯ ಭವನ, ಸಿಸಿ ರಸ್ತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಮತಕ್ಷೇತ್ರದ ಅಭಿವೃದ್ದಿಗೆ ₹137 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಾಸಕರೆಂದರೆ ದೇವರಲ್ಲ, ಸಾಮಾನ್ಯರಲ್ಲಿ ಸಾಮಾನ್ಯನಾಗಿರುವುದು. ಅವಕಾಶ ವಂಚಿತರಿಗೆ ಅವಕಾಶ ನೀಡುವುದು. ಹಿಂದೆ ಬಿದ್ದವರನ್ನು ಮುಂದೆ ತರುವುದು, ಎಲ್ಲಿ ಸತ್ಯ, ನ್ಯಾಯ, ಪ್ರಮಾಣಿಕತೆ ಇರುತ್ತದೆಯೋ ಅದರ ಜೊತೆ ಇರುವುದು ಅದೇ ನಿಜವಾದ ಪ್ರಜಾಪ್ರಭುತ್ವ. ಆ ಚಿಂತನೆಯೊಂದಿಗೆ ಚುನಾಯಿತ ಜನಪ್ರತಿನಿಧಿಗಳು ಕೆಲಸ ಮಾಡಬೇಕಾಗುತ್ತದೆ. ಹಿಂದೆಂದೂ ಆಗಲಾರದ ಅಭಿವೃದ್ದಿ ಕಾರ್ಯಗಳು ಪ್ರಾಮಾಣಿಕವಾಗಿ, ಮಾಡಿದ್ದೇನೆ. ಪ್ರಜಾಪ್ರಭುತ್ವದ ಮಾಲೀಕರು ಮತ ಹಾಕಿದವರು ಎಂದರು.

ಎಂದು ಹೇಳಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಜನ, ಜಾನುವಾರು, ಪಕ್ಷಿಗಳಿಗೂ ನೀರು ಬೇಕಾಗುತ್ತದೆ. ಭೀಮಾನದಿಗೆ ನೀರು ಹರಿಸದಿದ್ದರೆ ಇಂಡಿ ಕ್ಷೇತ್ರದ 16 ಗ್ರಾಮ ಹಾಗೂ ನಾಗಠಾಣ ಕ್ಷೇತ್ರದ 26 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಈ ಭಾಗದ ಜನ ಹೃದಯವಂತರು ಮತ್ತು ಪ್ರಜ್ಞಾವಂತರು ಎನ್ನುವುದಕ್ಕೆ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯೇ ಸಾಕ್ಷಿ ಎಂದರು.

ಎಸಿ ಅಬೀದ್ ಗದ್ಯಾಳ, ತಾಪಂ ಪ್ರಭಾರ ಇಒ ಸಂಜಯ ಖಡಗೆಕರ, ಹೆಸ್ಕಾಂ ಎಇಇ ಆರ್‌.ಎಸ್‌.ಮೆಂಡೆಗಾರ, ಡಾ.ಕನ್ನೂರ, ಬಿಇಒ ಟಿ.ಎಸ್‌.ಆಲಗೂರ, ಎಇಇ ದಯಾನಂದ ಮಠ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್‌.ಎಸ್‌.ಪಾಟೀಲ, ಎಂ.ಆರ್‌.ಪಾಟೀಲ(ಗೊಳಸಾರ), ಎಂ.ಆರ್‌.ಪಾಟೀಲ(ಬಳ್ಳೊಳ್ಳಿ), ಜಾವೀದ ಮೋಮಿನ, ಶಿವಯೋಗೆಪ್ಪ ಚನಗೊಂಡ, ಜಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಎಇಇ ಎಸ್‌.ಆರ್‌.ರುದ್ರವಾಡಿ, ಘಟಕ ವ್ಯವಸ್ಥಾಪಕ ಸಂಗಮೇಶ ಬಿರಾದಾರ, ಅಶೋಕ ಗಜಾಕೋಶ, ರಷಿದ ಅರಬ, ಮಲ್ಲು ಮಡ್ಡಿಮನಿ, ಇಲಿಯಾಸ ಬೊರಾಮಣಿ ಮೊದಲಾದವರು ವೇದಿಕೆ ಮೇಲಿದ್ದರು. ಪ್ರಶಾಂತ ಕಾಳೆ, ಮಹಿಬೂಬ ಅರಬ, ಮುಸ್ತಾಕ ಇಂಡಿಕರ, ಸುಧೀರ ಕರಕಟ್ಟಿ, ಸತೀಶ ಕುಂಬಾರ, ಅತೀಕ ಮೋಮಿನ, ಸುಭಾಷ ಬಾಬರ, ಸೋಮಶೇಖರ ಮ್ಯಾಕೇರಿ, ನಾಗೇಶ ತಳಕೇರಿ, ನಿರ್ಮಲಾ ತಳಕೇರಿ, ಶೈಲಶ್ರೀ ಜಾಧವ, ಚಂದು ಸಾಹುಕಾರ ಸೊನ್ನ, ಶಿವಾನಂದ ರಾವೂರ, ಚಂದಣ್ಣ ಆಲಮೇಲ, ಸಿದ್ದರಾಯ ಐರೋಡಗಿ, ಭೀಮಾಶಂಕರ ಮೂರಮನ, ಶಬ್ಬಿರ ಖಾಜಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕೋಟ್..ರಾಜ್ಯ ಸರ್ಕಾರ ಮೂರು ಹಂತದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ 2 ಹಾಗೂ 3ನೇ ಭಾಗಕ್ಕೆ ₹2 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ನಾನು 2ನೇ ಹಂತದ ಯೋಜನೆಗೆ ಚಾಲನೆ ನೀಡುವ ಕಾರ್ಯ ಮಾಡಬೇಕು ಎಂದರೆ, 2,3ನೇ ಹಂತದ ಕಾರ್ಯಕ್ಕೂ ಅನುಕೂಲ ಮಾಡಿಕೊಟ್ಟಿದಕ್ಕಾಗಿ ಮುಖ್ಯಮಂತ್ರಿ, ನೀರಾವರಿ ಸಚಿವರನ್ನು ಅಭಿನಂದಿಸುತ್ತೇನೆ. 2027 ಕ್ಕೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ 21 ಸಾವಿರ ಹೆಕ್ಟೇರ್ ಇಂಡಿ ಮತಕ್ಷೇತ್ರ ಹಾಗೂ 7 ಸಾವಿರ ಹೆಕ್ಟರ್‌ ನಾಗಠಾಣ ಕ್ಷೇತ್ರದ ಪ್ರದೇಶ ಸೇರಿದಂತೆ 70 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿಯ ಅನುಕೂಲವಾಗಲಿದೆ.ಯಶವಂತರಾಯಗೌಡ ಪಾಟೀಲ, ಶಾಸಕ.