ವಿಕಾಸಸೌಧದಲ್ಲಿ ಸ್ಪೀಕರ್, ಸಚಿವರ ಭೇಟಿ ಮಾಡಿದ ಜರ್ಮನಿ ಸಂಸದರು

| Published : Sep 04 2024, 01:48 AM IST

ವಿಕಾಸಸೌಧದಲ್ಲಿ ಸ್ಪೀಕರ್, ಸಚಿವರ ಭೇಟಿ ಮಾಡಿದ ಜರ್ಮನಿ ಸಂಸದರು
Share this Article
  • FB
  • TW
  • Linkdin
  • Email

ಸಾರಾಂಶ

ಜರ್ಮನಿಯ ಸಂಸತ್ ಸದಸ್ಯ ಜೇನ್ಸ್‌ ಗೀಯರ್ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ವಿಕಾಸಸೌಧದಲ್ಲಿ ಸ್ಪೀಕರ್ ಯು.ಟಿ.ಖಾದರ್‌, ಅರಣ್ಯ ಸಚಿವ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿತು.

- ಪರಿಸರ ರಕ್ಷಣೆ ಬಗ್ಗೆ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಜತೆ ಚರ್ಚೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜರ್ಮನಿಯ ಸಂಸತ್ ಸದಸ್ಯ ಜೇನ್ಸ್‌ ಗೀಯರ್ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ವಿಕಾಸಸೌಧದಲ್ಲಿ ಸ್ಪೀಕರ್ ಯು.ಟಿ.ಖಾದರ್‌, ಅರಣ್ಯ ಸಚಿವ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿತು.

ಜರ್ಮನಿ ಸಂಸದರಾದ ಜೇನ್ಸ್‌ ಗೀಯರ್‌, ಬುಂಡೆಸ್ಟಾಗ್‌ನ ಸದಸ್ಯ ಬೆಂಗ್ಟ್‌ ಬರ್ಗ್ಟ್‌, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ, ದಾವಣಗೆರೆಯ ಸೈಯದ್ ಖಾಲಿದ್‌ ಅಹಮ್ಮದ್‌ ಸೇರಿದಂತೆ ಅನೇಕರು ಈ ಸಂದರ್ಭ ಹಾಜರಿದ್ದರು.

ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಕುರಿತಂತೆ ನಿಯೋಗವು ಸ್ವೀಕರ್‌, ಸಚಿವರೊಂದಿಗೆ ಸಮಾಲೋಚನೆ ನಡೆಸಿತು. ಹವಾಮಾನ ವೈಪರೀತ್ಯ, ಪುನರ್ ಬಳಕೆ ವಸ್ತುಗಳು, ಅರಣ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು.

ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಜರ್ಮನಿಯ ಸಂಸತ್ ಸದಸ್ಯರ ಮಾತುಕತೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಅರಣ್ಯ ಸಂರಕ್ಷಣೆ, ಕಾಡು ರಕ್ಷಣೆಗೆ ಆಗುತ್ತಿರುವ ತೊಂದರೆ, ಅನಾಹುತ, ಅರಣ್ಯ ಒತ್ತುವರಿ, ವನ್ಯಜೀವಿಗಳು ಸೇರಿದಂತೆ ಹತ್ತುಹಲವು ವಿಷಯಗಳ ಕುರಿತಂತೆ ಸಮಾಲೋಚಿಸಿದರು. ಸಚಿವರು ಸೂಕ್ತವಾಗಿ ಸ್ಪಂದಿಸಿದರು. ಈ ಭೇಟಿಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದಂತೆ ಹತ್ತುಹಲವು ವಿಚಾರದ ಕುರಿತಂತೆ ಸಮಾಲೋಚಿಸಲಾಯಿತು. ಸಚಿವರೊಂದಿಗೆ ಜರ್ಮನಿ ಸದಸ್ಯರು ಮಹತ್ವದ ವಿಚಾರ ಹಂಚಿಕೊಂಡರು. ಪರಿಸರ ಸಂರಕ್ಷಣೆ, ವಸ್ತುಗಳ ಪುನರ್ಬಳಕೆ, ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ವಾಯು ಮಾಲಿನ್ಯ, ಸಂಪನ್ಮೂಲಗಳ ಮರುಬಳಕೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಸೈಯದ್ ಮಾಹಿತಿ ನೀಡಿದರು.

- - - -3ಕೆಡಿವಿಜಿ8, 9:

ಬೆಂಗಳೂರಿನಲ್ಲಿ ಜರ್ಮನಿಯ ಸಂಸದರ ನಿಯೋಗವು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್, ಸಚಿವರಾದ ಈಶ್ವರ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾಗಿ ಪರಿಸರ ಸಂರಕ್ಷಣೆ, ಅರಣ್ಯ ವಿಷಯಗಳ ಕುರಿತ ಸಮಾಲೋಚನೆ ನಡೆಸಿತು.