ಶಿಕ್ಷಣ ಪಡೆದು ಉನ್ನತ ಹುದ್ದೆಗಳ ಕಡೆ ಆದ್ಯತೆ ನೀಡಿ: ಜೆ.ಶ್ರೀನಿವಾಸ್

| Published : Aug 27 2024, 01:30 AM IST

ಸಾರಾಂಶ

ಸಮಾಜದ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗಳ ಪಡೆಯುವ ಕಡೆ ಮೊದಲ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜೆ. ಶ್ರೀನಿವಾಸ್ ಕರೆ ನೀಡಿದರು. ಯಳಂದೂರಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಸಮಾಜದ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗಳ ಪಡೆಯುವ ಕಡೆ ಮೊದಲ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜೆ. ಶ್ರೀನಿವಾಸ್ ಕರೆ ನೀಡಿದರು.

ಪಟ್ಟಣದ ಗೌತಮ್ ಬಡಾವಣೆಯಲ್ಲಿ ಶ್ರೀಭಗವಾನ್ ಬುದ್ಧ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕ ವರ್ಗದವರು ಮೊದಲ ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳನ್ನು ಉನ್ನತ ಹುದ್ದೆಗಳನ್ನು ಪಡೆಯುವುದಕ್ಕೆ ನಿರಂತರವಾಗಿ ಪ್ರೋತ್ಸಾಹಿಸಬೇಕು. ಇತ್ತೀಚಿನ ಯುವಕರು ಕುಡಿತದಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.

ಸಂಘದ ಗೌರವ ಅಧ್ಯಕ್ಷೆ ಎನ್. ರಾಮಯ್ಯ ಮಾತನಾಡಿ, ಪ್ರಸ್ತುತ ದಿನದಲ್ಲಿ ವಿದ್ಯಾವಂತರು ಸಮಾಜದಲ್ಲಿ ಹೋರಾಟ, ಸಂಘಟನೆ ಮಾಡಿ ಮುಂದೆ ಬರುವ ಕೆಲಸಗಳನ್ನು ಮಾಡುತ್ತಿಲ್ಲ. ಇದರಿಂದ ಸಮಾಜ ಅಭಿವೃದ್ಧಿಗೆ ಮಾರಕವಾಗಿ ಹಿನ್ನಡೆಗೆ ಕಾರಣವಾಗಲಿದೆ. ಜತೆಗೆ ಮೋಜು, ಮಸ್ತಿ, ದುಂದುವೆಚ್ಚ ಮಾಡುವ ಕಡೇ ಹೋಗುತ್ತಿರುವುದು ದೊಡ್ಡ ದುರಂತ. ಇವುಗಳನ್ನು ಮೊದಲು ಸ್ಥಗಿತಗೊಳಿಸಿ ಯುವ ಸಮುದಾಯ ಸಂಘತರಾಗಿ ಸಮಾಜದ ಅಭಿವೃದ್ಧಿಗೆ ಶಮಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಬಡಾವಣೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಈ ವೇದಿಕೆಯಲ್ಲಿ ಶ್ರೀಭಗ್‌ವಾನ್ ಬುದ್ಧ ಸೇವಾ ಸಂಸ್ಥೆ ಅಧ್ಯಕ್ಷ ಆರ್. ಕೃಷ್ಣಯ್ಯ, ಟಿಎಪಿಸಿಎಂಎಸ್ ನಿರ್ದೇಶಕರಾದ ಮಹದೇಶ್, ವೈ.ಬಿ. ನಂಜುಂಡಸ್ವಾಮಿ, ಕಾರ್ಯದರ್ಶಿ ಬಿ.ಸಿದ್ದರಾಜು, ಸಂಘದ ಗೌರವ ಅಧ್ಯಕ್ಷ ಸಿ. ಬಸವರಾಜು, ಜೆ. ನಾಗರಾಜು, ಉಪಾಧ್ಯಕ್ಷ ಎಸ್. ಗುರುಲಿಂಗಯ್ಯ, ಖಜಾಂಚಿ ಎಸ್. ಪುಟ್ಟರಾಜು, ನಿರ್ದೇಶಕರಾದ ಎ.ಎನ್. ನಾಗೇಂದ, ಎಂ.ಶ ಶಿಧರ್, ಎಚ್.ಬಿ. ಚಂದ್ರಶೇಖರ್, ಎಂ. ಮಲ್ಲಿಕಾರ್ಜುನ ಪ್ರಸನ್ನ ಕುಮಾರ್, ಟಿ. ನಂಜುಂಡಸ್ವಾಮಿ ಬ್ಯಾಂಕ್ ರಂಗಸ್ವಾಮಿ, ಯಜಮಾನರಾದ ನಂಜುಂಡಸ್ವಾಮಿ, ರೇವಣ್ಣ, ಕಾಂತರಾಜು, ವಂಕಟರಂಗಯ್ಯ, ರಾಚಯ್ಯ, ಮಲ್ಲಿಕಾರ್ಜುನಸ್ವಾಮಿ ಮತ್ತಿತರರಿದ್ದರು.