ಉತ್ತಮ ಫಲಿತಾಂಶ ಪಡೆದು ಬದಲಾವಣೆ ತನ್ನಿ : ಶಾಸಕ ಕಂದಕೂರ

| Published : Feb 23 2025, 12:35 AM IST

ಉತ್ತಮ ಫಲಿತಾಂಶ ಪಡೆದು ಬದಲಾವಣೆ ತನ್ನಿ : ಶಾಸಕ ಕಂದಕೂರ
Share this Article
  • FB
  • TW
  • Linkdin
  • Email

ಸಾರಾಂಶ

Get good results and bring change: MLA Kandakura

- ಮೊರಾರ್ಜಿ ವಸತಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

---

ಕನ್ನಡಪ್ರಭ ವಾರ್ತೆ ಯಾದಗಿರಿ

ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯುವ ಮುಖಾಂತರ ಬದಲಾವಣೆ ತರಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.

ತಾಲೂಕಿನ ಲಿಂಗೇರಿ ಸ್ಟೇಷನ್ ಮೊರಾರ್ಜಿ ವಸತಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲೇ ಎಂಬತ್ತು ವರ್ಷ ಕಳೆದಿವೆ. ಈಗಲೂ ಅದನ್ನೇ ಮುಂದುವರೆಸೋದು ಬೇಡ, ಈ ವರ್ಷದ ಫಲಿತಾಂಶದಲ್ಲಿ ಹೆಚ್ಚಳ ಆಗಬೇಕು. ಮುಂದಿನ ಒಂದು ತಿಂಗಳು ಜಮೀನುಗಳಿಗೆ ಹೋಗದೆ ಅಭ್ಯಾಸದ ಕಡೆಗೆ ಗಮನ ಕೊಡಬೇಕು ಎಂದು ಕಿವಿ ಮಾತು ಹೇಳಿದರು.

ಮುಂಬರುವ ದಿನದಲ್ಲಿ ಕಾಯಂ ಶಿಕ್ಷಕರ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಸರ್ಕಾರ ಭರವಸೆ ನೀಡಿದೆ. ನನ್ನ ಅಧಿಕಾರಾವಧಿಯಲ್ಲಿ ಬಂದಿರುವ ಅನುದಾನದಲ್ಲಿ ಶೇ.70-75ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ. ಆದರೆ ಈ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶ ಮಾತ್ರ ಏರಿಕೆ ಆಗಲೇ ಬೇಕು, ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದ ಹೊರತು ಸಮಸ್ಯೆಗಳಿಗೆ ಮುಕ್ತಿ ಪಡೆಯಲು ಸಾಧ್ಯವಿಲ್ಲ, ಸರಕಾರದ ಸವಲತ್ತುಗಳನ್ನು ಕೇಳಿ ಪಡೆಯುವ ಮನಸ್ಥಿತಿ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಗ್ರಾಪಂ ಅಧ್ಯಕ್ಷೆ ಹಣಮಂತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೆನ್ನಬಸಪ್ಪ, ಉಪ ತಹಶೀಲ್ದಾರ ಮಲ್ಲಪ್ಪ ಮಾಧ್ವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹವಳಪ್ಪ ಜಾನೇ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣ ಕುಮಾರ, ಲ್ಯಾಂಡ್‌ ಆರ್ಮಿಯ ಎಇಇ ಶಿವರಾಜ ಹುಡೇದ, ಬಸವರಾಜಪ್ಪಗೌಡ ಲಿಂಗೇರಿ, ಮಲ್ಲಣ್ಣಗೌಡ ಕೌಳೂರು, ಮಲ್ಲೇಶ ನಾಯಕ ಕೂಡ್ಲೂರು, ಹಣಮಂತ ನಾಯಕ, ಜಿಪಂ ಮಾಜಿ ಸದಸ್ಯ ಬಸವರಾಜ ಕಣೇಕಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕೋಟಗೇರಾ, ಬಸರೆಡ್ಡಿ ಹೆಗ್ಗಣಗೇರಾ, ಮಹಿಪಾಲರಡ್ಡಿ ಮಲ್ಹಾರ್, ಪರ್ವತರಡ್ಡಿ ಕಾಳೆಬೇಳಗುಂದಾ, ಶರಣಪ್ಪಗೌಡ ಹೊಸಳ್ಳಿ, ಅಲ್ಲಾವುದ್ದೀನ್ ನೀಲಹಳ್ಳಿ, ಲಕ್ಷ್ಮಣ ನಾಯಕ ಕೂಡ್ಲೂರು, ಗ್ರಾಪಂ ಮಾಜಿ ಅಧ್ಯಕ್ಷ ಮರೆಪ್ಪ ನಾಟೇಕರ, ಶರಣಗೌಡ ಕಾರಡ್ಡಿ, ಹಣಮಂತ ಇಸ್ಲಾಕರ, ಪರ್ವತರೆಡ್ಡಿ ಕಾಳೆಬೆಳಗುಂದಿ, ರಾಮು ದೊರೆ ಗೌಡಗೇರಾ ಸೇರಿದಂತೆ ಶಟ್ಟಿಗೇರಾ, ಬಳಿಚಕ್ರ ಗ್ರಾಮ ಮತ್ತು ತಾಂಡಾ, ಗೌಡಗೇರಾ ಗ್ರಾಮ ಮತ್ತು ತಾಂಡಾ ಜನರು ಇದ್ದರು.

==== ಬಾಕ್ಸ್ -1====

- ಟಾಪ್10 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಜಿಲ್ಲೆಯ 10 ವಿದ್ಯಾರ್ಥಿಗಳಿಗೆ ನಮ್ಮ ತಂದೆಯವರ ಹೆಸರಿನಲ್ಲಿ ಈಚೆಗೆ ಸ್ಥಾಪನೆ ಮಾಡಲಾದ ನಾಗನಗೌಡ ಕಂದಕೂರ ಫೌಂಡೇಶನ್‌ ಮುಖಾಂತರ ಪಿಯು ಕಾಲೇಜು ಶಿಕ್ಷಣಕ್ಕೆ ನೆರವು ನೀಡಬೇಕು ಎಂಬ ಅಪೇಕ್ಷೆ ಹೊಂದಿದ್ದೇನೆ. ಈ ಬಾರಿ ನಮ್ಮ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ 100 ಪರ್ಸೆಂಟ್ ಫಲಿತಾಂಶ ಪಡೆದುಕೊಳ್ಳಬೇಕು. ಸರಕಾರದ ಮಂತ್ರಿ, ಅಧಿಕಾರಿಗಳನ್ನು ಕಾಡಿ ಬೇಡಿ ಅನುದಾನ ತಂದು ನಾನು ನಿಮಗೆ ಸೌಲಭ್ಯಗಳನ್ನು ಕಲ್ಪಿಸುತ್ತೇನೆ. ಅದಕ್ಕೆ ಪ್ರತಿಯಾಗಿ ನೀವು ನನಗೆ ಫಲಿತಾಂಶ ತಂದುಕೊಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ವಿದ್ಯಾರ್ಥಿಗಳಿಗೆ ಹೇಳಿದರು.

==== ಬಾಕ್ಸ್ -2====

ಶೈಕ್ಷಣಿಕ ಪ್ರಗತಿಗೆ ಶಾಸಕರ ಕೊಡುಗೆ ಅಪಾರ, ಮೊರಾರ್ಜಿ ವಸತಿ ಶಾಲೆಗಳಿಗೆ ಮೂಲ ಸೌಲಭ್ಯಗಳ ಜತೆಗೆ ಹೈಮಾಸ್ಟ್ ದೀಪಗಳ ಅಳವಡಿಕೆ ಮಾಡಿದ್ದಾರೆ. ಅದರಂತೆ ಲಿಂಗೇರಿ ಸ್ಟೇಷನ್ ವಸತಿ ಶಾಲೆಗೆ ಟ್ರ್ಯಾಕ್ ಹಾಗೂ ವಿದ್ಯಾರ್ಥಿಗಳಿಗೆ ಭೋಜನಾಲಯ, ಕಂಪ್ಯೂಟರ್ ಲ್ಯಾಬ್ ಅವಶ್ಯವಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಕಲ್ಯಾಣ ಪಥವಾಗಿ ಸಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚನ್ನಬಸಪ್ಪ ಅವರು ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಕಂದಕೂರ ಅವರು ಕೂಡಲೇ ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.

----

22ವೈಡಿಆರ್‌15 : ಗುರುಮಠಕಲ್‌ ತಾಲೂಕಿನ ಲಿಂಗೇರಿ ಸ್ಟೇಷನ್ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಲಾಯಿತು.