ಸಾರಾಂಶ
ರಾಜಕಾರಣದಲ್ಲಿ ಜನಪ್ರತಿನಿಧಿಯಾಗಿ ಕೇವಲ 5ವರ್ಷ ಸೇವೆಗೆ ಅವಕಾಶವಿದೆ. ವಿದ್ಯಾವಂತರಾದರೆ ಉನ್ನತ ಹುದ್ದೆಗೇರಿ ಆಡಳಿತಾತ್ಮಕ ಅಧಿಕಾರ ನಡೆಸುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಪಾವಗಡ
ರಾಜಕಾರಣದಲ್ಲಿ ಜನಪ್ರತಿನಿಧಿಯಾಗಿ ಕೇವಲ 5ವರ್ಷ ಸೇವೆಗೆ ಅವಕಾಶವಿದೆ. ವಿದ್ಯಾವಂತರಾದರೆ ಉನ್ನತ ಹುದ್ದೆಗೇರಿ ಆಡಳಿತಾತ್ಮಕ ಅಧಿಕಾರ ನಡೆಸುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸಿಂಚನ ಮತ್ತು ಚಿಣ್ಣರ ಕಲರವ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ವಸತಿ ಶಾಲೆಗಳಿಗೆ ಸರ್ಕಾರ ಪೂರ್ಣ ಪ್ರಮಾಣದ ಅನುದಾನ ನೀಡುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಮನೆಯಲ್ಲಿನ ಕಷ್ಟದ ದಿನಗಳನ್ನು ಮರೆಯಬಾರದು. ಅವುಗಳನ್ನು ಸ್ಮರಿಸುತ್ತಾ ಗುಣಾತ್ಮಕ ಶಿಕ್ಷಣ ಪಡೆದು ಉನ್ನತ ವ್ಯಾಸಂಗ ಮಾಡಬೇಕು. ಈ ಮೂಲಕ ಉನ್ನತ ಹುದ್ದೆಗೇರಿ ಈ ದೇಶ ಹಾಗೂ ರಾಜ್ಯ ಸೇವೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜಕಾರಣಿಗಳು ಚುನಾಯಿತರಾದ ಬಳಿಕ ಕೇವಲ 5 ವರ್ಷ ಮಾತ್ರ ಅಧಿಕಾರವಿರುತ್ತದೆ. ಆದರೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದರೆ ಶಾಶ್ವತವಾಗಿ ನಿಮ್ಮ ಭವಿಷ್ಯ ಉಜ್ಜಲವಾಗಿರುತ್ತದೆ. ಇಲ್ಲಿನ ತುಮಕೂರು ಡಿಸಿ ಮತ್ತು ನಗರಸಭೆ ಅಯುಕ್ತರು ಇಬ್ಬರು ಹೆಣ್ಣು ಮಕ್ಕಳು ಅವರು ಉನ್ನತ ಶಿಕ್ಷಣ ಪಡೆದು ಜಿಲ್ಲೆ ಆಡಳಿತಾಧಿಕಾರಿಗಳಾಗಿದ್ದು ಹೆಮ್ಮೆಯ ವಿಚಾರ. ಉನ್ನತ ಶಿಕ್ಷಣ ಕೊಡಿಸುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪೋಷಕರು ಸಹ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವತ್ತ ಅಸಕ್ತಿ ವಹಿಸಬೇಕು. ಶೈಕ್ಷಣಿಕವಾಗಿ ಪಾವಗಡ ಅಭಿವೃದ್ಧಿ ಪಥದತ್ತ ಸಾಗಬೇಕೆಂಬುವುದು ನನ್ನ ಹಾಗೂ ನಮ್ಮ ತಂದೆ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಕನಸಾಗಿದೆ ಎಂದರು. ಶಾಸಕರಾದ ಬಳಿಕ ಈಗಾಗಲೇ ತಾಲೂಕಿನ ಪ್ರಗತಿಗೆ 100ಕೋಟಿ ವಿನಿಯೋಗಿಸಿ ವಿವಿಧ ಕ್ಷೇತ್ರದ ಪ್ರಗತಿ ಕೈಗೊಂಡಿದ್ದೇವೆ. ಜನತೆಯ ನಿರೀಕ್ಷೆಯಂತೆ ಇನ್ನೂ ಮುಂದೆ ಸಹ ವಿವಿಧ ಯೋಜನೆ ಅಡಿಯಲ್ಲಿ ಪ್ರಗತಿಗೆ ಹೆಚ್ಚಿನ ಅದ್ಯತೆ ನೀಡಲಿದ್ದೇವೆ ಎಂದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ ಈ ಹಿಂದೆ ಪಾವಗಡ ಶೈಕ್ಷಣಿಕವಾಗಿ ಹಿಂದೆ ಉಳಿದಿತ್ತು. ಎಚ್.ವಿ.ವೆಂಕಟೇಶ್ ಶಾಸಕರಾದ ಬಳಿಕ ಮಿಂಚಿನ ವೇಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಆಸಕ್ತಿ ನೀಡಿದ ಪರಿಣಾಮ ಪಾವಗಡ ತಾಲೂಕು ಶೈಕ್ಷಣಿಕವಾಗಿ ಬೆಳೆಯುವಂತಿರುವುದು ಸಂತಸ ತಂದಿದೆ ಎಂದರು.ಪ್ರಾಂಶುಪಾಲರಾದ ಕಸ್ತೂರಿ ಕುಮಾರ ಮಾತನಾಡಿ ರಾಜ್ಯ ಸರ್ಕಾರ ಮೆಡಿಕಲ್ ವ್ಯಾಸಾಂಗಕ್ಕೆ 25 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದ್ದು ಸದ್ಭಳಕೆ ಆಗಬೇಕಿದೆ. ಪಾವಗಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಕೇಂದ್ರ ತೆರೆಯುವ ಅಗತ್ಯವಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷರಾದ ಮೀನಾಕ್ಷಮ್ಮ, ಪ್ರಾಂಶುಪಾಲರಾದ ಸರೀತಾ, ತಿಪ್ಪೇಸ್ವಾಮಿ, ಸಂತೋಷ್, ಜಿಲ್ಲಾ ಮಾಹಿತಿ ಅಧಿಕಾರಿ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷರಾದ ಜಗದೀಶ್, ಸದಸ್ಯರಾದ ದೇವೆಂದ್ರ, ಮುಖಂಡರಾದ ಮಾರಪ್ಪ,ಕೆ.ರಾಮಪುರ ರಮೇಶ್, ಅಕ್ಕಲಪ್ಪ, ಅಂಜಿನಾಯಕ, ಎ.ಗೋಪಿ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು. ಫೋಟೋ 2ಪಿವಿಡಿ1ತಾಲೂಕಿನ ದೊಡ್ಡಹಳ್ಳಿಯ ವಾಜಿಪೇಯಿ ವಸತಿ ಶಾಲೆಯಲ್ಲಿ ಜ್ಞಾನ ಸಿಂಚನ ಕಾರ್ಯಕ್ರಮವನ್ನು ಶಾಸಕ ಎಚ್.ವಿ.ವೆಂಕಟೇಶ್ ಉದ್ಘಾಟಿಸಿದರು.