ಸ್ಥಳೀಯ ಚುನಾವಣೆಗೆ ಸಿದ್ಧರಾಗಿ: ಅಣ್ಣಾಸಾಹೇಬ ಜೊಲ್ಲೆ ಕರೆ

| Published : Jun 26 2024, 12:31 AM IST

ಸ್ಥಳೀಯ ಚುನಾವಣೆಗೆ ಸಿದ್ಧರಾಗಿ: ಅಣ್ಣಾಸಾಹೇಬ ಜೊಲ್ಲೆ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಾಯಬಾಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಉತ್ತಮವಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಉತ್ತಮವಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದ ಆದರ್ಶ ಶಿಕ್ಷಣ ಸಂಸ್ಥೆ ಸಭಾ ಭವನದಲ್ಲಿ ಬಿಜೆಪಿ ರಾಯಬಾಗ ಮಂಡಲದಿಂದ ಆಯೋಜಿಸಿದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಇದೇ ಸೋಲು ನಮ್ಮ ಮುಂದಿನ ಗೆಲುವಿಗೆ ಸೋಪಾನವಾಗಬೇಕು, ಶಕ್ತಿಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸೋಲನ್ನು ಸ್ವೀಕರಿಸುವ ಮನೋಭಾವ ಹಾಗೂ ಎದೆಗಾರಿಕೆ ಇರಬೇಕು. ಅಂದಾಗ ಮಾತ್ರ ಮುಂದಿನ ಗೆಲುವಿಗೆ ಹೊಸ ದಾರಿ ಹುಡುಕಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಶಕ್ತಿ ಮೀರಿ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆಗೆ ಈಗಿನಿಂದಲೇ ಸನ್ನದ್ಧರಾಗಬೇಕು. ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದರು.ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ನ್ಯಾಯವಾದಿ ಎಲ್.ಬಿ.ಚೌಗಲಾ ಮಾತನಾಡಿದರು. ರಾಯಬಾಗ ಶಾಸಕ ಡಿ.ಎಂ.ಐಹೊಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಸುರೇಶ ಬೆಲ್ಲದ, ಅನಿಲ ಹಂಜೆ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಬ ಬ್ಯಾಕೂಡೆ, ಸದಾನಂದ ಘೋರ್ಪಡೆ, ರಾಜು ಹಳಗನ್ನವರ, ಅಮೀತ ಜಾಧವ, ಪ್ರಧಾನಿ ಉಪ್ಪಾರ, ರಾಮಚಂದ್ರ ಕಾಟೆ, ನವೀನ ವಾಘ, ರಮೇಶ ಪೂಜಾರಿ, ಅಪ್ಪು ಬಾನಿ, ಸಂಗಪ್ಪ ದತ್ತವಾಡೆ, ಗೋಪಾಲ ಕೋಚೇರಿ, ಅಶೋಕ ಪಾಮದಿನ್ನಿ ಮುಂತಾದವರು ಇದ್ದರು.