ಸಾರಾಂಶ
ಕನ್ನಡಪ್ರಭ ವಾರ್ತೆ ಮುಗಳಖೋಡ
ವಿದ್ಯಾರ್ಥಿಗಳು ಮೊಬೈಲ್ ಅವಶ್ಯಕತೆಗೆ ತಕ್ಕಂತೆ ಬಳಕೆಮಾಡಿ, ಕೃಷ್ಣ ಸುಧಾಮರಂತ ಗೆಳೆತನ ಇರಬೇಕು, ದುಶ್ಚಟಗಳ ದಾಸರಾಗದಿರಿ, ಪ್ರೀತಿ-ಪ್ರೇಮ ವ್ಯಾಮೋಹಕ್ಕೆ ಒಳಗಾಗದಿರಿ, ಒಳ್ಳೆಯ ಹವ್ಯಾಸ ಹಾಗೂ ನಿರಂತರ ವಿದ್ಯಾಭ್ಯಾಸ ಈ 5 ಸೂತ್ರದಿಂದ ಸಾಧಕರಾಗಿ ಎಂದು ಹಾರೂಗೇರಿ ಸನ್ನಸನ್ನಿ ಆಸ್ಪತ್ರೆಯ ಮುಖ್ಯವೈದ್ಯ ಡಾ.ಯಲ್ಲಾಲಿಂಗ ಸನ್ನಸನ್ನಿ ಹೇಳಿದರು.ಪಟ್ಟಣದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಿದ್ದರಾಮೇಶ್ವರ ಪದವಿ ಪೂರ್ವ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ ಮತ್ತು ಎನ್‌ಎಸ್‌ಎಸ್ ಶಿಬಿರ ಉದ್ಘಾಟನಾ ಸಮಾರಂಭ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬದುಕಿನ ಮೈಲುಗಲ್ಲು. ನಮ್ಮೆಲ್ಲರ ಸಾಧನೆಗೆ ಒಂದು ಬೃಹತ್ ವೇದಿಕೆ. ಇಲ್ಲಿ ವಿದ್ಯಾರ್ಜನೆ ಮುಖ್ಯ ಗುರಿ, ನಮ್ಮ ಗುರಿ ಮುಟ್ಟಲು ತಂದೆ-ತಾಯಿ ಶ್ರಮ, ಗುರುವಿನ ಮಾರ್ಗದರ್ಶನದಲ್ಲಿ ಸಾಗಿ ಸಾಧನೆಯ ಶಿಖರ ಮುಟ್ಟಲು ಇಂದಿನಿಂದಲೇ ಸಿದ್ಧರಾಗಿ ಎಂದು ಸಲಹೆ ನೀಡಿದರು.ವರ್ತಮಾನದ ಜೀವಂತಿಕೆಯಲ್ಲಿ ವಿದ್ಯಾರ್ಥಿಗಳಾದ ನೀವು ತಂದೆ-ತಾಯಿ ಗುರು ಹಿರಿಯರ ಆಸೆಗೆ ಚ್ಯುತಿ ಬಾರದಂತೆ ಸದಾಚಾರ ಸದ್ವಿಚಾರ, ಸಂಸ್ಕೃತಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾಭ್ಯಾಸ ಮಾಡಿ ಕೀರ್ತಿ ಪತಾಕೆ ಹಾರಿಸುವ ವ್ಯಕ್ತಿಗಳಾಗಿರಿ ಎಂದು ಸಂಸ್ಥೆಯ ಸಂಸ್ಥಾಪಕ ವ್ಯವಸ್ಥಾಪಕ ಅಶೋಕ ಕೊಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಯ ವಿರುಪಾಕ್ಷಿ ಕರಡಿ, ಪ್ರಾಚಾರ್ಯ ಶಿವಾನಂದ ಹಂಚಿನಾಳ, ಗುರು ಜಂಬಗಿ, ಸರಸ್ವತಿ ಸಾರವಾಡೆ, ಸವಿತಾ ಮಗದುಮ್ಮ, ಪತ್ರಕರ್ತರಾದ ಸದಾಶಿವ ಬಡಿಗೇರ, ಶ್ರೀಮಂತ ಘಟನಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಕವಿತಾ ಬೊರಂಗಾವಿ ಸ್ವಾಗತಿದರು. ಶ್ರೀದೇವಿ ಹುಲಗನಿ ನಿರೂಪಿಸಿದರು. ಪ್ರೀತಿ ಜಂಬಗಿ ವಂದನಾರ್ಪಣೆ ಮಾಡಿದರು.ಬಡತನ ಕುಟುಂಬದಲ್ಲಿ ಹುಟ್ಟಿ ತಂದೆ-ತಾಯಿ ಶ್ರಮ, ಗುರುವಿನ ಮಾರ್ಗದರ್ಶನದಲ್ಲಿ ನಡೆದು ಇಂದು ನಿಮ್ಮ ಮುಂದೆ ನಿಂತು ಮಾತನಾಡಲು ಶಕ್ತಿ ತುಂಬಿದವರ ಆಶಾ ಕಿರಣನಾಗಿ ನೊಂದವರ ನೋವಿಗೆ ಸ್ಪಂದಿಸುವ ಒಬ್ಬ ನಿಮ್ಮ ಪ್ರೀತಿಯ ವೈದ್ಯನಾಗಿ ಸದಾಕಾಲ ಸೇವೆ ಸಲ್ಲಿಸುತ್ತಿರುವೆನು. ನಮ್ಮ ನಿಮ್ಮ ಸೇವೆ ಸಮಾಜ ಮುಖಿಯಾಗಿರಲಿ.
-ಡಾ.ಯಲ್ಲಾಲಿಂಗ ಸನ್ನಸನ್ನಿ, ಹಾರೂಗೇರಿ ಸನ್ನಸನ್ನಿ ಆಸ್ಪತ್ರೆಯ ಮುಖ್ಯವೈದ್ಯರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))