ವಚನ ಭ್ರಷ್ಟ ಬಿಜೆಪಿ ಕಿತ್ತೊಗೆದು ಜನಪರ ಕಾಂಗ್ರೆಸ್‌ ಕೈ ಹಿಡಿಯಿರಿ

| Published : Apr 29 2024, 01:34 AM IST

ವಚನ ಭ್ರಷ್ಟ ಬಿಜೆಪಿ ಕಿತ್ತೊಗೆದು ಜನಪರ ಕಾಂಗ್ರೆಸ್‌ ಕೈ ಹಿಡಿಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿದಿಲ್ಲ. ಇಲೆಕ್ಟ್ರಾಲ್‌ ಬಾಂಡ್‌ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಮಾಡಿ, ಬಿಜೆಪಿ ಪಕ್ಷದ ಆಸ್ತಿಯನ್ನು ಹೆಚ್ಚಿಗೆ ಮಾಡಿಕೊಂಡಿದೆ. ಇಂತಹ ಭ್ರಷ್ಟ ಬಿಜೆಪಿಯನ್ನು ಸೋಲಿಸಿ ಎಂದು ವಿನೋದ್ ಅಸೂಟಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ವಚನಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಹೇಳಿದರು.

ಇಲ್ಲಿಯ ಲೈನ್‌ ಬಜಾರ್‌ನ ಅಜಾದ್ ಸಾಮಿಲ್ ಕಾಂಪೌಂಡ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಶ್ಚಿಮ ಮತಕ್ಷೇತ್ರದ ವಾರ್ಡ್ ನಂಬರ್ 19ರ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿದಿಲ್ಲ. ಇಲೆಕ್ಟ್ರಾಲ್‌ ಬಾಂಡ್‌ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಮಾಡಿ, ಬಿಜೆಪಿ ಪಕ್ಷದ ಆಸ್ತಿಯನ್ನು ಹೆಚ್ಚಿಗೆ ಮಾಡಿಕೊಂಡಿದೆ. ಇಂತಹ ಭ್ರಷ್ಟ ಬಿಜೆಪಿಯನ್ನು ಸೋಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಸ್ಮಾಯಿಲ್ ತಮಟಗಾರ, ಸಮೀರ ಗರಗ, ನಿಶಾದ್ ಶ್ಯಾನೂರ, ಈರ್ಷಾದ ಸೌದಾಗರ್, ಉಮರ್ ಬಿಜಾಪುರ, ಅಬ್ದುಲ್ ದೇಸಾಯಿ, ಬಷೀರ್ ಜಾಗೀರದಾರ ಇದ್ದರು.

ಶಿಗ್ಗಾಂವ ಕ್ಷೇತ್ರ

ಧಾರವಾಡ ಲೋಕಸಭಾ ವ್ಯಾಪ್ತಿಯ ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಹಾಗೂ ಬೃಹತ್ ರೋಡ್ ಶೋ ಬಂಕಾಪೂರ ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಸೂಟಿ, ಕೊಟ್ಟ ಭರವಸೆಗಳನ್ನು ಕೇವಲ ಹತ್ತು ತಿಂಗಳೊಳಗೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಅದೇ ರೀತಿ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 25 ಭರವಸೆಗಳನ್ನು ಈಡೇರಿಸುತ್ತೇವೆ. ಜೋಶಿಯವರು ಕೇವಲ ಚುನಾವಣೆಗೆ ಮಾತ್ರ ಹಳ್ಳಿಗಳಿಗೆ ಬರುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಆದ್ದರಿಂದ ನಮ್ಮ ಪಕ್ಷದ ಕಾಂಗ್ರೆಸ್ ಬೆಂಬಲಿಸಿ ಎಂದರು.ಸಚಿವ ಎಚ್.ಎಂ. ರೇವಣ್ಣ, ವಿಪ ಮುಖ್ಯ ಸಚೇತಕ ಸಲೀಂ ಅಹಮದ್, ಯಾಸೀರ ಅಹ್ಮದ ಖಾನ ಪಠಾಣ, ಸೋಮಣ್ಣ ಬೇವಿನಮರದ, ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ, ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲ್ದಿ ಮತ್ತಿತರರು ಇದ್ದರು. ನಂತರ ಹೋತನಹಳ್ಳಿಯಲ್ಲಿ ಪ್ರಚಾರ ಸಭೆ ನಡೆಯಿತು. ಅಲ್ಲಿ ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಇದ್ದರು. ಚಂದಾಪೂರದಲ್ಲಿ..

ಕ್ಷೇತ್ರದ ಚಂದಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿಗ್ಗಾಂವ್ - ಸವಣೂರ ವಿಧಾನಸಭಾ ಕ್ಷೇತ್ರದ ಸಭೆಯಲ್ಲೂ ಅಸೂಟಿ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಹರಿಹಾಯ್ದರು. ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಮಯದಲ್ಲಿ ಜನರು ಬಿಜೆಪಿಯಿಂದ ಎಚ್ಚರಿಕೆಯಿಂದ ಇರಬೇಕೆಂದರು. ಕ್ಷೇತ್ರದ ಮುಖಂಡರೊಂದಿಗೆ ಅನೀಲಕುಮಾರ ಪಾಟೀಲ, ಬಸವರಾಜ ಗುರಿಕಾರ, ಪ್ರೇಮಾ ಪಾಟೀಲ, ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಸ್ಯರು ಮತ್ತು ಹಿರಿಯರು ಇದ್ದರು.