ಸ್ವರ್ಣಭೂಮಿ ಅಧ್ಯಕ್ಷರಾಗಿ ಗಿರೀಶ್ ಆಯ್ಕೆ

| Published : Nov 21 2025, 02:00 AM IST

ಸಾರಾಂಶ

ತಾಲೂಕಿನ ದಬ್ಬೇಘಟ್ಟದಲ್ಲಿ ಸ್ಥಾಪಿತವಾಗಿರುವ ಸ್ವರ್ಣಭೂಮಿ ರೈತ ಉತ್ಪಾದಕ ಕಂಪನಿಯ ನೂತನ ಅಧ್ಯಕ್ಷರಾಗಿ ಮುದಿಗೆರೆಯ ಎಂ.ಕೆ.ಗಿರೀಶ್, ಮೇಲಿನವರಗೇನಹಳ್ಳಿಯ, ಎಂ.ರವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಈ ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದಬ್ಬೇಘಟ್ಟದಲ್ಲಿ ಸ್ಥಾಪಿತವಾಗಿರುವ ಸ್ವರ್ಣಭೂಮಿ ರೈತ ಉತ್ಪಾದಕ ಕಂಪನಿಯ ನೂತನ ಅಧ್ಯಕ್ಷರಾಗಿ ಮುದಿಗೆರೆಯ ಎಂ.ಕೆ.ಗಿರೀಶ್, ಮೇಲಿನವರಗೇನಹಳ್ಳಿಯ, ಎಂ.ರವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಈ ನೇಮಕ ಮಾಡಲಾಗಿದೆ.

ಈ ವೇಳೆ ನೂತನ ಅಧ್ಯಕ್ಷ ಎಂ.ಕೆ.ಗಿರೀಶ್ ಮಾತನಾಡಿ, ತಮ್ಮ ಕಂಪನಿಯಿಂದ ಕೃಷಿ ಸಂಬಂಧಿಸಿದ ಪರಿಕರಗಳು, ಬಿತ್ತನೆ ಬೀಜ, ಜೈವಿಕ ಗೊಬ್ಬರಗಳು, ಸಿರಿಧಾನ್ಯಗಳು, ಗಾಣದ ಎಣ್ಣೆ, ಜೇನು ಕೃಷಿ, ಹಾಗೂ ಸಾವಯವ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಈ ಸಂಸ್ಥೆ ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆಯಾಗಿರುವುದರಿಂದ ಇಲ್ಲಿ ಲಾಭದ ಪ್ರಶ್ನೆಯೇ ಉದ್ಭವಿಸದು. ಸರ್ಕಾರದಿಂದ ಹಾಗೂ ಇನ್ನಿತರ ಕಂಪನಿಗಳಿಂದ ರೈತರಿಗೆ ಅನುಕೂಲವಾಗುವ ಎಲ್ಲಾ ಸವಲತ್ತುಗಳನ್ನು ತಮ್ಮ ಸಂಸ್ಥೆಯಲ್ಲಿ ಮಾರಲಾಗುವುದು. ತಮ್ಮ ಬಗ್ಗೆ ಗೌರವವಿಟ್ಟು ಅಧ್ಯಕ್ಷ ಸ್ಥಾನ ನೀಡಿದ ಎಲ್ಲಾ ಕಂಪನಿಯ ನಿರ್ದೇಶಕರು ಮತ್ತು ಸದಸ್ಯರಿಗೆ ತಾವು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು. ನೂತನ ಅಧ್ಯಕ್ಷ ಮುದಿಗೆರೆ ಎಂ.ಕೆ.ಗಿರೀಶ್ ಮತ್ತು ಉಪಾಧ್ಯಕ್ಷ ಎಂ.ರವಿಯವರನ್ನು ಕಂಪನಿಯ ನಿರ್ದೇಶಕರಾದ ಡಿ.ಜೆ.ಬಸವರಾಜು, ಎಚ್.ಜಿ.ಕುಮಾರಸ್ವಾಮಿ, ಎನ್.ಕುಮಾರ್, ಡಿ.ಕೆ.ಬೋರೇಗೌಡ, ಬಿ.ನಾಗೇಶ್ ಬಾಬು, ಎಂ.ರವಿ, ಡಿ.ಲೋಕೇಶ್ ಗೌಡ, ಬಿ.ಉಮೇಶ್, ಎಚ್. ಎಲ್. ಅನಂತ್ ಕುಮಾರ್, ಎಂ.ಎಂ.ಶ್ರೀನಿವಾಸ್, ಕೆ.ಎಂ.ಚೇತನ್, ಟಿ.ಎನ್.ರಂಜಿತಾ, ಎ.ಆರ್.ಗಿರೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಇ.ವಿನೋದ್, ಲೆಕ್ಕಾಧಿಕಾರಿ ಟಿ.ಆರ್.ಮೇಘನಾ, ಮುಖಂಡರಾದ ದೇವರ ಮಾವಿನಕೆರೆ ಮಂಜೇಶ್, ದಬ್ಬೇಘಟ್ಟದ ಬೋರೇಗೌಡ, ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು.