ಸಾರಾಂಶ
ಕನ್ನಡಪ್ರಭ ವಾರ್ತೆ ಯರಗಟ್ಟಿ ಹೆಣ್ಣು ಮನೆ ನಂದಾದೀಪ, ಹೆಣ್ಣು ತಾನು ಉರಿದು ಜಗ ಬೆಳಗಿಸುವ ದೀಪದಂತೆ. ಬೆಳಗಲಿ ಬಿಡಿ ಆ ಹೆಣ್ಣು ಮಗುವನ್ನು ಉಳಿಸಿ, ಬೆಳೆಸಿ, ಓದಿಸಿ ಗೌರವಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೆಣ್ಮಕ್ಕಳು ತನ್ನ ತ್ಯಾಗಕ್ಕೆ ಪ್ರತಿಯಾಗಿ ಏನೂ ಬಯಸುವುದಿಲ್ಲ. ಎಲ್ಲರ ಪ್ರೀತಿ ವಿಶ್ವಾಸವೇ ಅವಳ ಧೈರ್ಯ. ತನ್ನ ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡುಪಾಗಿಡುತ್ತಾಳೆ ಎಂದು ಬಣ್ಣಿಸಿದರು.ಗಂಡು, ಹೆಣ್ಣು ಮಗು ಜನನ ಅನುಪಾತ ಪ್ರಕೃತಿ ದತ್ತವಾಗಿದ್ದು, ಹೆಣ್ಣು, ಗಂಡು ಭೇದ-ಭಾವ ಮಾಡದೇ ಎಲ್ಲ ಮಕ್ಕಳಿಗೆ ಪ್ರೀತಿ ವಾತ್ಸಲ್ಯ ನೀಡಿ ಬೆಳೆಸಬೇಕು. ಇದರಿಂದಾಗಿಯೇ ಸರ್ಕಾರವು ಬೇಟಿ ಬಚಾರ, ಬೇಟಿ ಪಡಾವ, ಭಾಗ್ಯಲಕ್ಷ್ಮೀ ಯೋಜನೆಗಳ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸುತ್ತಿದೆ. 2024ರ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಘೋಷವಾಕ್ಯವಾದ ಮಹಿಳಾ ಸಬಲೀಕರಣ ಎಂಬ ಘೋಷಣೆಯೊಂದಿಗೆ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹೆರಿಗೆ ಹಾಗೂ ಪಶೂತಿ ತಜ್ಞ ಡಾ.ಬಸವರಾಜ ನರೇಗಲ್, ಡಾ.ಬಿ.ಎಸ್.ಬಳ್ಳೂರ, ಡಾ.ಮಡಿವಾಳೇಶ್ವರ, ಡಾ.ರಮಾಶ್ರೀ ಕಣಗಲಿ, ಡಾ.ಸುಧಾರಾಣಿ ಹಳ್ಳಿ, ಎನ್.ಎಂ.ಹಾರೂಗೊಪ್ಪ, ಮಂಜುಳಾ ಈರಗಾರ ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ತಾಯಂದಿರು ಇದ್ದರು. ಈ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಂದಿಯರಿಗೆ ಸಿಹಿ ಹಂಚಿದರು. ನಿರ್ಮಲಾ ಹಾರೂಗೊಪ್ಪ ವಂದಿಸಿದರು. ಮಂಜುಳಾ ಈರಗಾರ ನಿರೂಪಿಸಿದರು.ಕೋಟ್...ಪ್ರಾಚೀನ ಕಾಲದಿಂದಲೂ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂದು ಸ್ತ್ರೀ-ಪುರುಷರ ನಡುವಿನ ತಾರತಮ್ಯ ಹೆಚ್ಚಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು.
ಐ.ಆರ್.ಗಂಜಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು.