ಸಾರಾಂಶ
ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಹೇಮ-ಸದಾನಂದ ದಂಪತಿ ಪುತ್ರಿ ವಿನುತಾ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಅಗತ್ಯ ಹಣಕಾಸಿನ ನೆರವು ನೀಡುವಂತೆ ಬಲ್ಲೇನಹಳ್ಳಿ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಹೇಮ-ಸದಾನಂದ ದಂಪತಿ ಪುತ್ರಿ ವಿನುತಾ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಅಗತ್ಯ ಹಣಕಾಸಿನ ನೆರವು ನೀಡುವಂತೆ ಬಲ್ಲೇನಹಳ್ಳಿ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನುತಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಮೂಳೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇದುವರೆಗೂ ದಾನಿಗಳ ಸಹಾಯದಲ್ಲಿ ಸುಮಾರು 20 ಲಕ್ಷ ರು. ವೆಚ್ಚ ಮಾಡಿ ಚಿಕಿತ್ಸೆ ಮಾಡಿಸಲಾಗಿದೆ ಎಂದರು.
ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಭಾಗದಲ್ಲಿ ಮತ್ತೆ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಆಸ್ಪತ್ರೆ ವೈದ್ಯರು ತಪಾಸಣೆಗೆ ಒಳಪಡಿಸಿದಾಗ ಸದರಿ ಭಾಗಕ್ಕೆ ಮರು ಶಸ್ತ್ರ ಚಿಕಿತ್ಸೆಯನ್ನು ಶೀಘ್ರ ಕೈಗೊಳ್ಳಬೇಕೆಂದು ತಿಳಿಸಿದ್ದು, ಇಲ್ಲವಾದಲ್ಲಿ ಸದರಿ ಭಾಗಕ್ಕೆ ಅಪಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.ಈ ಚಿಕಿತ್ಸೆಗೆ ಅಂದಾರು 2 ಲಕ್ಷ ರು. ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದು, ಆದರೆ, ಬಡ ಕುಟುಂಬವಾಗಿದ್ದು, ನಮಗೆ ಯಾವುದೇ ಆಸ್ತಿ ಅಥವಾ ಆದಾಯದ ಮೂಲ ಇಲ್ಲ. ಹೀಗಾಗಿ ಬಾಲಕಿ ತಾಯಿ ಹೇಮ ಅವರು ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಮಾಡಿ ಅಮೂಲ್ಯವಾದ ಜೀವ ಉಳಿಸಲು ಮನವಿ ಮಾಡಿದ್ದಾರೆ ಎಂದರು.
ಆರ್ಥಿಕ ನೆರವು ನೀಡುವ ದಾನಿಗಳು ಹೇಮ, ಕರ್ನಾಟಕ ಬ್ಯಾಂಕ್, ಶ್ರೀರಂಗಪಟ್ಟಣ, ಖಾತಾ ನಂ.7092500101895101, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ-0000709, ಮೊ:7090221842 ಸಂಪರ್ಕಿಸುವಂತೆ ಕೋರಿದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿ ವಿನುತಾ, ತಾಯಿ ಹೇಮ ಹಾಜರಿದ್ದರು.