ಸಾರಾಂಶ
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿರುವ ಮಹಿಳಾ ಮತದಾರರ ಶಕ್ತಿ ಇದು. ಅಂದರೆ ಒಟ್ಟಾರೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ.
- ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು, ಬರೋಬ್ಬರಿ 47 ಸಾವಿರಕ್ಕಿಂತ ಅಧಿಕ ಮಹಿಳೆಯರು
-ಆರ್.ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೆಣ್ಣು ಮಕ್ಕಳೇ ಸ್ಟ್ರಾಂಗ್..!- ಇದು, ಸಿನಿಮಾದ ಟೈಟಲ್ ಅಂದುಕೊಂಡಿರಾ ? ಖಂಡಿತವಾಗಿಯೂ ಅಲ್ಲ.ಅಂದರೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿರುವ ಮಹಿಳಾ ಮತದಾರರ ಶಕ್ತಿ ಇದು. ಅಂದರೆ ಒಟ್ಟಾರೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಉಭಯ ಜಿಲ್ಲೆಗಳು ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ. ಈ 8 ಕ್ಷೇತ್ರಗಳಲ್ಲೂ ಕೂಡ ಮಹಿಳಾ ಮತದಾರರೇ ಹೆಚ್ಚಿದ್ದಾರೆ ಎಂಬುದು ವಿಶೇಷ.ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,72, 958, ಈ ಪೈಕಿ ಪುರುಷ ಮತದಾರರ ಸಂಖ್ಯೆ 7,62,558 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 8,10,362 ರಷ್ಟಿದೆ. ಅಂದರೆ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳಾ ಮತದಾರರ ಸಂಖ್ಯೆ 47,804 ರಷ್ಟು ಹೆಚ್ಚಿದೆ. ಈ ಪೈಕಿ ಉಡುಪಿಯಲ್ಲಿ 31, 272 ಇದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 16,532 ರಷ್ಟಿದೆ.ಕುಂದಾಪುರ ಫಸ್ಟ್: ಉಭಯ ಜಿಲ್ಲೆಗಳ ಪೈಕಿ ಅತಿ ಹೆಚ್ಚು ಮಹಿಳಾ ಮತದಾರರು ಇರುವುದು ಕುಂದಾಪುರದಲ್ಲಿ ಅಂದರೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆ 7,985 ರಷ್ಟಿದೆ. ಎರಡನೇ ಸ್ಥಾನದಲ್ಲಿ ಕಾಪು, ಇಲ್ಲಿ 7,890, ಉಡುಪಿಯಲ್ಲಿ 7,718, ಕಾರ್ಕಳದಲ್ಲಿ 7,679 ಮಹಿಳಾ ಮತದಾರರು ಹೆಚ್ಚಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದಲ್ಲಿ 4949 ರಷ್ಟಿದ್ದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ 4408, ಶೃಂಗೇರಿಯಲ್ಲಿ 4335 ಹಾಗೂ ತರೀಕೆರೆ ಕ್ಷೇತ್ರದಲ್ಲಿ 2840 ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ.ಕಡ್ಡಾಯ ಮತದಾನ:ಮಹಿಳೆಯರು ಮನೆಯಿಂದ ಹೊರಗೆ ಬರುವುದಿಲ್ಲ ಎಂಬ ಮಾತು ಹಲವು ದಶಕಗಳ ಹಿಂದಿತ್ತು. ಆದರೆ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬಂದಿದ್ದಾರೆ. ಸರ್ಕಾರಗಳು ಕೂಡ ಮಹಿಳಾ ಮತದಾರರನ್ನು ಕೇಂದ್ರೀಕರಿಸಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಕಳೆದ 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದ್ದರು. ಹಾಗಾಗಿ ಈ ಬಾರಿಯೂ ಕೂಡ ಅದೇ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು ಸ್ವಿಪ್ ಸಮಿತಿಗಳು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಒಟ್ಟಾರೆ ಮಹಿಳೆಯರು ರಾಜಕೀಯದಲ್ಲಿ ಮೀಸಲಾತಿ ಹೆಚ್ಚಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳ ನಡುವೆ ಇಂತಹ ಅಂಕಿ ಅಂಶ ಸಕಾರಾತ್ಮಕವಾಗಿದೆ ಎನ್ನಬಹುದು.----- ಬಾಕ್ಸ್ -------- ವಿಧಾನಸಭಾ ಕ್ಷೇತ್ರ ಗಂಡುಹೆಣ್ಣು (ಮತದಾರರು)-----------------------------------------------ಕುಂದಾಪುರ 101066 109051----------------------------------------------ಉಡುಪಿ 105654 113372-------------------------------------------ಕಾಪು 91492 99382-------------------------------------------ಕಾರ್ಕಳ 92226 99905----------------------------------------ಶೃಂಗೇರಿ 81874 86209---------------------------------------------ಮೂಡಿಗೆರೆ8283587784--------------------------------------------ಚಿಕ್ಕಮಗಳೂರು 112797 117205---------------------------------------------ತರೀಕೆರೆ 94614 97454-------------------------------------------ಒಟ್ಟು 762558 810362-------------------------------------------- 20 ಕೆಸಿಕೆಎಂ 3ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.