ಸಾರಾಂಶ
ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಸೋಲನುಭವಿಸಿತು. ಚಂಡೀಗಢ ವಿರುದ್ಧ 8-2 ಗೋಲುಗಳಿಂದ ಹಿಮ್ಮೆಟ್ಟಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ17 ವರ್ಷ ವಯೋಮಿತಿಯ ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಸೋಲನುಭವಿಸಿತು. ಜಾರ್ಖಂಡ್, ಮಧ್ಯಪ್ರದೇಶ, ಚಂಡೀಗಢ, ಮಣಿಪುರ ತಂಡಗಳು ಸೆಮಿಫೈನಲ್ ಪ್ರವೇಶಿಸಿತು.ಶನಿವಾರ ಎಂಟು ತಂಡಗಳ ನಡುವೆ ಸೋಮವಾರಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆಯಿತು. ಜಾರ್ಖಂಡ್ ಹಾಗೂ ಒಡಿಸ್ಸಾ ತಂಡಗಳ ನಡುವೆ ನಡೆದ ಮೊದಲ ಪಂದ್ಯಲ್ಲಿ ಜಾರ್ಖಂಡ್ 8-1 ಗೋಲು ಗಳಿಸುವ ಮೂಲಕ ಗೆಲುವು ಸಾಧಿಸಿತು. 2ನೇ ಪಂದ್ಯದಲ್ಲಿ ಮಣಿಪುರ ತಂಡವು ಕೇರಳ ತಂಡವನ್ನು 5-0 ಗೋಲಿನಿಂದ ಸೋಲಿಸಿತು.ಚಂಡೀಗಢ ತಂಡವು ಕರ್ನಾಟಕ ತಂಡವನ್ನು 8-2 ಗೋಲಿನಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಮಧ್ಯಪ್ರದೇಶ ತಂಡವು ಪಂಜಾಬ್ ತಂಡವನ್ನು 2-0 ಗೋಲಿನಿಂದ ಸೋಲಿಸಿತು.
ಜ.8ರಂದು ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.