ಸಾರಾಂಶ
ಪುಸ್ತಕ ನೀಡಿ ಹೊಸ ವರ್ಷ ಸ್ವಾಗತ
ಲೋಕಾಪುರ:ಸಮೀಪದ ಮೆಟಗುಡ್ಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಡೋಣಿ ತೋಟದ ಶಾಲೆಯಲ್ಲಿ ೨೦೨೪ನೇ ವರ್ಷಕ್ಕೆ ರನ್ನಬೆಳಗಲಿಯ ಯುವಕವಿ ಸುರೇಶ ರಾಜಮಾನೆ ಅವರು ಬರೆದ ವಿಶ್ವಾಸದ ಹೆಜ್ಜೆಗಳು ಎಂಬ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವುದರ ಮೂಲಕ ವಿಭಿನ್ನವಾಗಿ ಸ್ವಾಗತಿಸಿಕೊಂಡರು.
ಯಾವುದೇ ಕೇಕ್, ಪಟಾಕಿ, ಗಿಫ್ಟ್‌ಗಳ ಆಡಂಬರವಿಲ್ಲದೇ ಮಕ್ಕಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸಕ್ತ ವರ್ಷದಲ್ಲಿ ಏನೇನು ಸಂಕಲ್ಪ ಮಾಡಬೇಕೆಂಬ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳಿಂದ ಕೇಳಿಕೊಂಡು ಪುಸ್ತಕದಲ್ಲಿ ಬರೆದಿಡಲಾಯಿತು. ತಂದೆ ತಾಯಿಯ ಮತ್ತು ಗುರುಗಳ ಹೆಸರನ್ನು ಶಾಲೆಯ ಹೆಸರನ್ನು ಉಳಿಸುವಂತಹ ಕೆಲಸಗಳನ್ನು ಈ ವರ್ಷದಲ್ಲಿ ಮಾಡುತ್ತೇನೆ ಎಂದು ಮಕ್ಕಳು ಹೇಳಿದ್ದು ವಿಶೇಷವೇನಿಸಿತು.ಪುಸ್ತಕಗಳನ್ನು ನೀಡಿ ಬರಮಾಡಿಕೊಂಡು ಗುರುಗಳಿಗೆ ಮಕ್ಕಳು ಧನ್ಯವಾದಗಳನ್ನು ಅರ್ಪಿಸುವುದರ ಜೊತೆಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತೇವೆ ಎಂಬ ಭರವಸೆ ನೀಡಿದರು. ಮುಖ್ಯಗುರು ಸುರೇಶ ಎಲ್. ರಾಜಮಾನೆ ಮತ್ತು ಸಹ ಶಿಕ್ಷಕರಾದ ರಾಜೇಂದ್ರ ಸುತಾರ ಗುರುಗಳು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.