ಯಾವುದಾದರೂ ಬಡಾವಣೆಗೆ ಕುವೆಂಪು ಹೆಸರು ನಾಮಕರಣ ಮಾಡಿ: ಡಾ.ಬಲ್ಲೇನಹಳ್ಳಿ ಶಂಕರ್

| Published : Jan 06 2025, 01:03 AM IST

ಯಾವುದಾದರೂ ಬಡಾವಣೆಗೆ ಕುವೆಂಪು ಹೆಸರು ನಾಮಕರಣ ಮಾಡಿ: ಡಾ.ಬಲ್ಲೇನಹಳ್ಳಿ ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಮತ ಎನ್ನದೆ ಸಮಸ್ತ ಜನರ ಕುರಿತು ಅವರ ವಿಚಾರಧಾರೆ ಹೊರತಂದಿದ್ದಾರೆ. ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ಬಡಾವಣೆಗೆ ಕುವೆಂಪು ಅವರ ಹೆಸರು ನಾಮಕರಣ ಮಾಡಬೇಕು. ಪಟ್ಟಣದ ಒಳ ಮುಖ್ಯ ರಸ್ತೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ಇರುವ ರಸ್ತೆಗೆ ಕುವೆಂಪು ಅವರ ಹೆಸರನ್ನು ನೋಂದಾಯಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಯಾವುದಾದರೊಂದು ಬಡಾವಣೆಗೆ ವಿಶ್ವಮಾನವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಸಹಕಾರ ಸಂಘಗಳ ನಿಬಂಧಕ ಡಾ.ಬಲ್ಲೇನಹಳ್ಳಿ ಶಂಕರ್ ಸ್ಥಳಿಯ ಶಾಸಕರಲ್ಲಿ ಮನವಿ ಮಾಡಿದರು.

ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದ ಕುವೆಂಪು ಪ್ರತಿಮೆ ಬಳಿ ಕುವೆಂಪು ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕುವೆಂಪು ಅವರ 120ನೇ ಜಯಂತಿಯಲ್ಲಿ ಉಪನ್ಯಾಸ ನೀಡಿ, ನಾಡಿನ ಉದ್ದಕ್ಕೂ ಕುವೆಂಪು ಅವರ ವಿಚಾರಧಾರೆಗಳು ಪ್ರಜ್ವಲಿಸುತ್ತಿವೆ ಎಂದರು.

ಜಾತಿ, ಮತ ಎನ್ನದೆ ಸಮಸ್ತ ಜನರ ಕುರಿತು ಅವರ ವಿಚಾರಧಾರೆ ಹೊರತಂದಿದ್ದಾರೆ. ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ಬಡಾವಣೆಗೆ ಕುವೆಂಪು ಅವರ ಹೆಸರು ನಾಮಕರಣ ಮಾಡಬೇಕು. ಪಟ್ಟಣದ ಒಳ ಮುಖ್ಯ ರಸ್ತೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ಇರುವ ರಸ್ತೆಗೆ ಕುವೆಂಪು ಅವರ ಹೆಸರನ್ನು ನೋಂದಾಯಿಸಬೇಕು ಎಂದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಪಟ್ಟಣ ಪುರಸಭೆ ಸದಸ್ಯರು ಒಟ್ಟುಗೂಡಿ ಮುಂದಿನ ದಿನದಲ್ಲಿ ಸಭೆ ಕರೆದು ಅವರ ಹೆಸರನ್ನು ಪ್ರಸ್ಥಾಪನೆಗೆ ತೆಗೆದುಕೊಂಡು ನಾಮ ನಿದೇರ್ಶನ ಮಾಡಲು ಮನವಿ ಮಾಡಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಪಟ್ಟಣದಲ್ಲಿ ವಕೀಲ ಸಿ.ಪುಟ್ಟಸ್ವಾಮಿ ಅವರ ಹೋರಾಟದಿಂದ ಕುವೆಂಪು ಪ್ರತಿಮೆ ಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ಕುವೆಂಪು ಅವರ ಹೆಸರನ್ನು ಬಡಾವಣೆಗೂ ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದರಸಗುಪ್ಪೆ ನಾಟಿವೈದ್ಯ ಸ್ವಾಮಿ, ಸಮಾಜ ಸೇವೆಗೆ ಕುಡಲಕುಪ್ಪೆ ಸೋಮು, ಚಿಕ್ಕಂಕನಹಳ್ಳಿ ಪ್ರಗತಿಪರ ರೈತ ಶಾಂತರಾಜು, ಮಾದರಿ ಜನಪ್ರತಿನಿಧಿ ಮಂಡ್ಯದಕೊಪ್ಪಲು ಎಂ.ಕೆ. ಮಂಜುನಾಥ್, ಆಕಾಶವಾಣಿ ಕಲಾವಿದ ಕೆ.ಶೆಟ್ಟಹಳ್ಳಿ ಮಂಟೇಲಿಂಗಯ್ಯ ಇವರುಗಳಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳೊಂದಿಗೆ ಕುವೆಂಪು ಭಾವಚಿತ್ರ ಇರಿಸಿ ಮೆರವಣಿಗೆ ನಡೆಸಲಾಯಿತು. ವಿಶ್ವಮಾನವ ಕುವೆಂಪು ಜಯಂತಿ ಆಚರಣಾ ಸಮಿತಿ ಗೌರವಾಧ್ಯಕ್ಷ ವಕೀಲ ಸಿ.ಪುಟ್ಟಸ್ವಾಮಿ , ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಂ.ಎಲ್. ದಿನೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಂದೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್. ಲೋಕೇಶ್, ಕೃಷಿ ಸಮಾಜದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ.ಎಸ್.ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗು, ಪುರಸಭೆ ಸದಸ್ಯರಾದ ಪ್ರಕಾಶ್, ಕೃಷ್ಣಪ್ಪ, ಗಂಜಾಂ ಶಿವು, ಕೆ.ಬಿ. ಬಸವರಾಜು, ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ಕುವೆಂಪು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಸಿ.ಸ್ವಾಮೀಗೌಡ, ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ ಚಿಕ್ಕಪಾಳ್ಯ, ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಕರವೇ ಅಧ್ಯಕ್ಷ ಶಂಕರ್, ಕಸಾಪ ನಗರ ಘಟಕದ ಅಧ್ಯಕ್ಷೆ ಸರಸ್ವತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿದೇವಿ, ಅನ್ನದಾತ ಸಂಸ್ಥೆಯ ರುಕ್ಮಾಂಗದ ಸೇರಿದಂತೆ ಇತರ ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.