ಸಾರಾಂಶ
ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಪಡೆಯುವಂತೆ ತಿಳಿಸಿದರು. ಈ ಶಾಲಾ ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಮುಂದಿನ ಜೂನ್ ತಿಂಗಳ ಒಳಗೆ ಹೊಸ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳಬಹುದು.
ಕನ್ನಡಪ್ರಭ ವಾರ್ತೆ ಬನ್ನೂರು
ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿದರೆ ದೇಶಕ್ಕೆ ಉತ್ತಮ ಪ್ರಜೆ ನೀಡಿದಂತೆ ಆಗುತ್ತದೆ ಎಂದು ಆಹ್ವಾಹನ್ ಫೌಂಡೇಶನ್ ಸಿಇಓ ಬ್ರಾಜಾ ಕಿಶೋರ್ ಪ್ರಧಾನ್ ಹೇಳಿದರು.ಪಟ್ಟಣದ ಸಮೀಪದ ತುರಗನೂರು ಗ್ರಾಮದಲ್ಲಿ ಶುಕ್ರವಾರ ಸರ್ಕಾರಿ ಶಾಲಾ ಕಟ್ಟಡದ ಶಂಕುಸ್ಥಾಪನ ಕಾರ್ಯಕ್ರಮಕ್ಕೆ ಆಗಮಿಸಿ, ಮೊದಲೆ ಗುರುತಿಸಿದ್ದಂತ ಶಿಥಿಲವಾಗಿದ್ದಂತ ಕಟ್ಟಡವನ್ನು ತಮ್ಮ ಸ್ವಂತ ಹಣದಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.
ದೇಶದ ಬೆಳವಣಿಗೆಗೆ ಶಿಕ್ಷಣ ಮಹತ್ವದ್ದಾಗಿದ್ದು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಏನು ಕಮ್ಮಿ ಇಲ್ಲದಂತೆ ಈ ಶಾಲೆಯನ್ನು ನಿರ್ಮಾಣ ಮಾಡಿ, ವಿದ್ಯಾರ್ಥಿಗಳ ಓದಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಪಡೆಯುವಂತೆ ತಿಳಿಸಿದರು. ಈ ಶಾಲಾ ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಮುಂದಿನ ಜೂನ್ ತಿಂಗಳ ಒಳಗೆ ಹೊಸ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳಬಹುದು ಎಂದು ಭರವಸೆ ನೀಡಿದರು.ಕರ್ನಾಟಕ ರಾಜ್ಯ ಸಹಕಾರ ಮಂಡಳಿ ನಿರ್ದೇಶಕ ಡಾ.ಡಿ.ಎಲ್. ನಾಗೇಂದ್ರ ನೇತ್ರ ತಜ್ಞ ರಂಗಸ್ವಾಮಿ, ಸತೀಶ್, ಲಕ್ಷ್ಮಣ್, ಯೋಗಣ್ಣಚಾರ್, ಸಿದ್ದೇಗೌಡ, ಚನ್ನೇಗೌಡ, ಮಧುಮಂಜುನಾಥ್, ನಯನಶಂಕರ್, ಅಂಜನಾ, ಮುರಳಿ, ಸಾಯಿರಾಮ್, ಲೋಕೇಶ್, ಟಿ. ಮಾದಯ್ಯ, ಬಸಪ್ಪ, ಡಿ. ಕೃಷ್ಣ, ಮಂಜುಳಾ, ಎಂ.ಸಿ. ಹರೀಶ್, ರೇಣುಕಾಹೆಗಡೆ, ಮೋಹನ್ ಕುಮಾರಿ, ಲಕ್ಷ್ಮಿ, ನಯನ ಇದ್ದರು.