ಪಾಲಕರು ಮಕ್ಕಳಿಗೆ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ಮನೆಯಲ್ಲಿ ಅಭ್ಯಾಸ ಮಾಡುವಂತೆ ಪಾಲಕರು ಗಮನಿಸಬೇಕು.

ನರಗುಂದ: ಮಕ್ಕಳಿಗೆ ಆಸ್ತಿ ಮಾಡದೇ, ಪಾಲಕರು ಒಳ್ಳೆಯ ಶಿಕ್ಷಣ ನೀಡಿದರೆ ಮಕ್ಕಳ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಸೋಮವಾರ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪ್ರೌಢಶಾಲೆ ನಂ. 1ರಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 2025- 26ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಉತ್ತಮವಾಗಿರುವುದಕ್ಕೆ ಶಿಕ್ಷಣ ಇಲಾಖೆಯ ಎಲ್ಲ ಭಾಗಿದಾರರನ್ನು ಶ್ಲಾಘಿಸಿದರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಸಲಹೆ ನೀಡಿದರು.

ಪಾಲಕರು ಮಕ್ಕಳಿಗೆ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ಮನೆಯಲ್ಲಿ ಅಭ್ಯಾಸ ಮಾಡುವಂತೆ ಪಾಲಕರು ಗಮನಿಸಬೇಕು. ಮಕ್ಕಳಿಗೆ ಮೊಬೈಲನ್ನು ಕೊಡಕೂಡದು. ಶಿಕ್ಷಕರು ಪ್ರತಿನಿತ್ಯ ವಿಷಯಗಳ ಬಗ್ಗೆ ಬೋಧಿಸುವುದು, ಶಾಲೆಯಲ್ಲಿ ಶಿಕ್ಷಕರು ಪಾಠ ಬೋಧನೆ ಅವಧಿಯಲ್ಲಿ ಮಾತ್ರ ಮೊಬೈಲ್ ಬಳಸಬೇಡಿ. ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ, ಶೂ, ಸಾಕ್ಸ್ ಮಧ್ಯಾಹ್ನದ ಬಿಸಿಯೂಟ ಈ ಎಲ್ಲ ಕಾರ್ಯಕ್ರಮಗಳು ಜಾರಿಯಲ್ಲಿವೆ. ಪೋಷಕರು ತಮ್ಮಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಲು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಮುತ್ತವಾಡ, ಬಸವರಾಜ ನೆಗಳೂರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್. ನಿಡಗುಂದಿ, ಎಂ.ಡಿ. ಅಸುಂಡಿ, ಬಸವರಾಜ ಮಳಗಿ, ಎಸ್.ಡಿ. ಇನಾಮದಾರ, ಎಂ.ಬಿ. ಮಲ್ಲಾಪೂರ, ಎನ್.ಎಂ. ಬರ‍್ಕಿ, ಬಿ.ಎ. ಬೋಯಿಟೆ, ಎಸ್.ವೈ. ಸುರಕೋಡ, ಆರ್.ಕೆ. ಮುಧೋಳೆ, ಹನುಮಂತಪ್ಪ ಮಾದರ, ಎಸ್.ಎಸ್. ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ

ರೋಣ: ಪಟ್ಟಣದ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆ ಹಾಗೂ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು.ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿ ವಿತರಿಸಿ ಸ್ವಾಗತಿಸಲಾಯಿತು. ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಹೊಸಮನಿ, ಎಸ್ಡಿಎಂಸಿ ಅಧ್ಯಕ್ಷ ಶಿವಣ್ಣ ನವಲಗುಂದ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಬಿ‌. ಮಡಿವಾಳರ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಐ.ಆರ್. ಕುಲಕರ್ಣಿ, ಶಿಕ್ಷಕರಾದ ವಿ.ಎಂ. ಬಾವಿ, ಎಚ್.ಆರ್. ಓಲೇಕಾರ, ಬಿ.ಎಚ್. ಕೊರ್ಲಹಳ್ಳಿ, ಮಂಜುಳಾ ಮಡಿವಾಳರ, ಎಸ್.ಡಿ. ಹುಲ್ಲೂರ, ಎ.ಎಚ್. ಹೊಸಮನಿ, ಎ.ಆರ್. ಹೆಬ್ಬಳ್ಳಿ, ಗೀತಾ ಮ್ಯಾಕಲ್, ಎಂ.ಎಸ್‌. ಹೊಸಮನಿ, ಎಸ್.ಐ. ನೀಲಪ್ಪಗೌಡ್ರ, ವಿ.ಡಿ. ಮಾಳಗಿ, ಎಸ್.ಎಂ. ಪಾಟೀಲ, ಆರ್.ಎಚ್. ನಾಯಕ, ಎಂ.ಎ. ಬಡೇಖಾನ, ಎಸ್.ಟಿ. ವಾಲ್ಮೀಕಿ, ಎಸ್.ಎಫ್. ಹುಣಸಿಮರದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.