ಸಾರಾಂಶ
ಇಂದು ಕಷ್ಟಪಟ್ಟು ಅಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿರುವ ಉದಾಹರಣೆಗಳಿವೆ
ಗದಗ: ಶ್ರಮಿಕರಾಗಿರುವ ಹಮಾಲರು ಮತ್ತು ಚಕ್ಕಡಿಯವರು ತಮ್ಮ ಮಕ್ಕಳಿಗೆ ಆದರ್ಶ ಮೌಲ್ಯಗಳೊಂದಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಲು ಮುಂದಾಗಬೇಕೆಂದು ಗದಗ-ಬೆಟಗೇರಿ ಜನರಲ್ ವರ್ಕರ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿ ಅಧ್ಯಕ್ಷ ಸುಭಾಸ್ ಕಟಗೇರಿ ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡದ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣದಿಂದ ವ್ಯಕ್ತಿ ದೊಡ್ಡ ಸ್ಥಾನ ತಲುಪಬಲ್ಲ ಎಂದರು.ಸಮಿತಿಯ ಗೃಹ ಮಂಡಳಿ ವಿಭಾಗದ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಕಷ್ಟದ ಜೀವನ ಬದುಕಿನಲ್ಲಿ ಪಾಠ ಕಲಿಸುವದು. ಹಮಾಲರ, ಚಕ್ಕಡಿಯವರ, ಕಾರ್ಮಿಕರ ಮಕ್ಕಳು ಇಂದು ಕಷ್ಟಪಟ್ಟು ಅಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿರುವ ಉದಾಹರಣೆಗಳಿವೆ. ಅಯ್ಯಪ್ಪ ನಾಯ್ಕರ್ ನಾಯಕತ್ವದ ಗುಣ ಹಾಗೂ ಪರಿಶ್ರಮ ಸಾಧನೆ ಶ್ಲ್ಯಾಘಿಸಿದರು.
ಈ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಹಾಗೂ ಮಾಜಿ ಸೈನಿಕ ವೀರಪ್ಪ ಬಿಂಗಿ ಮಾತನಾಡಿದರು.ಪವಿತ್ರ ಕಾಶೀ ಯಾತ್ರೆ ಕೈಗೊಳ್ಳುತ್ತಿರುವ ಹಮಾಲರ ಮುಖಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡದ ಬಾಲಕರ ವಸತಿ ನಿಲಯದ ಅಧ್ಯಕ್ಷ ಅಯ್ಯಪ್ಪ ನಾಯ್ಕರ್, ಉಪಾಧ್ಯಕ್ಷೆ ಶಾರದಾ ಅಯ್ಯಪ್ಪ ನಾಯ್ಕರ್ ಹಾಗೂ ಕೃಷ್ಣಾ ಅಯ್ಯಪ್ಪ ನಾಯ್ಕರ್ ಅವರನ್ನು ಸನ್ಮಾನಿಸಿ ಯಾತ್ರೆಗೆ ಶುಭ ಕೋರಲಾಯಿತು.
ರಾಮಚಂದ್ರ ಹರಿಜನ, ಜಹಾಂಗೀರಸಾಬ್, ಮುಕ್ತುಂಸಾಬ್ ನಾಗನೂರ, ಯಲ್ಲಪ್ಪ ಬೇವಿನಮರದ, ರಿಯಾಜ ದೊಡ್ಡಮನಿ, ರಂಗಪ್ಪ ಯರಗುಡಿ, ಅಲ್ಲಾಭಕ್ಷಿ ನದಾಫ್, ರವಿ ರಾಯಲದಡ್ಡಿ, ಬಸವರಾಜ ಬೇವಿನಮರದ, ಈರಣ್ಣ ಮಾಡೊಳ್ಳಿ, ಈರಣ್ಣ ಪ್ರತಾಪಸಿಂಗ್, ಮಹ್ಮದ ಅಣ್ಣಿಗೇರಿ, ಹನುಮಂತಪ್ಪ ಜಾನಗಾರ, ಮಾಯಪ್ಪ ಬೆಣ್ಣಿ, ಗೋವಿಂದಪ್ಪ ಮುಂಡರಗಿ, ಹಮೀದ್ ಅಣ್ಣಿಗೇರಿ, ಬಸವರಾಜ ಸೂಡಿ, ಈರಪ್ಪ ಮುಧೋಳ ಸೇರಿದಂತೆ ಮುಂತಾದವರು ಇದ್ದರು. ಸಮಿತಿಯ ಕಾರ್ಯದರ್ಶಿ ಇಮಾಮಸಾಬ್ ರೋಣದ ಸ್ವಾಗತಿಸಿ ನಿರೂಪಿಸಿದರು. ರಾಜೇಸಾಬ್ ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೇನಸಾಬ್ ವಡವಿ ಪರಿಚಯಿಸಿದರು. ಮಾರುತಿ ರಾಯಲ್‌ರಡ್ಡಿ ವಂದಿಸಿದರು.