ಕಡೂರುಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ಕೊಡಿ ಎಂದು ನಿವೃತ್ತ ಉಪ ನಿರ್ದೇಶಕ ದೊಡ್ಡಮಲ್ಲಪ್ಪ ಹೇಳಿದರು.
ಶ್ರೀ ವಾಗ್ದೇವಿ ಶಾಲೆಯ ವಾರ್ಷಿಕೋತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ಕೊಡಿ ಎಂದು ನಿವೃತ್ತ ಉಪ ನಿರ್ದೇಶಕ ದೊಡ್ಡಮಲ್ಲಪ್ಪ ಹೇಳಿದರು. ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನಲ್ಲಿ ಶ್ರೀ ವಾಗ್ದೇವಿ ಹಿರಿಯ ಪ್ರಾಥಮಿಕ ಶಾಲೆಯ 26 ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ ಆಧುನಿಕ ಸ್ಪರ್ಧಾ ಪ್ರಪಂಚದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವ ಜೊತೆಗೆ ಉತ್ತಮ ಸಂಸ್ಕಾರ ರೂಢಿಸಿ ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಲೋಕೇಶನಾಯ್ಕ ಮಾತನಾಡಿ, ಮಕ್ಕಳನ್ನು ಚೆನ್ನಾಗಿ ಓದಿಸ ಬೇಕು. ಮುಂದಿನ ಗುರಿ ಮುಟ್ಟಲು ಬೇಕಾದ ಧೈರ್ಯ ಮತ್ತು ಸಾಮರ್ಥ್ಯ ಹೆಚ್ಚಿಸಿಸುವಂತೆ ಮಾಡಿದರೆ ಮಾತ್ರ ನಿರೀಕ್ಷೆ ಗುರಿ ಮುಟ್ಟಲು ಸಾಧ್ಯ ಎಂದರು.ದೇವನೂರು ಗ್ರಾ.ಪಂ.ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ ಮಾತನಾಡಿ, ಮಕ್ಕಳು ಮತ್ತು ಶಾಲೆ ಪ್ರಗತಿ ಬಗ್ಗೆ ಪೋಷಕರು ವಿಚಾರಿ ಸುತ್ತಿರಬೇಕು. ಮಕ್ಕಳ ಓದು ಎಷ್ಟು ಮುಖ್ಯವೋ ಆಟೋಟಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಡಬೇಕು ಎಂದರು. ಈ ಸಂದರ್ಭದಲ್ಲಿ ಕಡೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಸಂಪತ್‌ಕುಮಾರ್ , ಗ್ರಾ.ಪಂ.ಸದಸ್ಯರಾದ ಷಣ್ಮುಖಪ್ಪ, ಮಂಜುನಾಥ್, ರವಿಕುಮಾರ್, ಆನಂದಪ್ಪ ಶಶಿಕಲಾ, ಬಾಲಕೃಷ್ಣ, ಸುಮಿತ್ರಾ ಲೋಕೇಶ್, ಚಂದ್ರಮ್ಮ, ಲಕ್ಷ್ಮಣ್ ಮಾತನಾಡಿದರು. ಗ್ರಾಮದ ಮುಖಂಡ ಕುಮಾರಗೌಡ, ಶಿಕ್ಷಣ ಸಂಸ್ಥೆಯ ಬಸವರಾಜು, ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಪ್ರಿಯಾಂಕ, ಪರಿಮಳ ಹಾಗೂ ಮಕ್ಕಳು ಪೋಷಕರು ಹಾಜರಿದ್ದರು. 26ಕೆಕೆಡಿಯು1. ಕಡೂರು ತಾಲೂಕಿನ ದೇವನೂರಿನಲ್ಲಿ ಶ್ರೀ ವಾಗ್ದೇವಿ ಹಿರಿಯ ಪ್ರಾಥಮಿಕ ಶಾಲೆಯ 26 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ನಿವೃತ್ತ ಉಪ ನಿರ್ದೇಶಕ ದೊಡ್ಡಮಲ್ಲಪ್ಪ ಉದ್ಘಾಟಿಸಿದರು.