ಶಿಕ್ಷಣ ಪಡೆಯುವ ಕಾಲದಲ್ಲಿ ಕ್ರೀಡೆ ಸಹ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆಯಲ್ಲಿ ಸೋಲು- ಗೆಲುವು ಅರಗಿಸಿಕೊಂಡು ಸಮಚಿತ್ತದಲ್ಲಿರುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಓದಿನ ಜತೆ ಪಠ್ಯೇತರ ಚಟುವಟಿಕೆಗಳು ನಮ್ಮ ದೈಹಿಕ- ಭೌತಿಕ- ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದ ಶಾಸಕರು, ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡುವ ಮೊಬೈಲ್ ಹಾಗೂ ಜಾಲತಾಣಗಳ ಅವಲಂಬನೆ ಕಡಿಮೆ ಮಾಡಿ. ಕೋಣೆಯಿಂದ ಹೊರಬಂದು ಮೈದಾನದಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.

ಮಾಲೂರು: ವಿದ್ಯಾರ್ಥಿಗಳಿಗೆ ವ್ಯಾಸಂಗ ಕಾಲದಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸುವಲ್ಲಿ ಕ್ರೀಡೆ ಮಹತ್ತರ ಪಾತ್ರ ವಹಿಸಲಿರುವುದರಿಂದ ಶಿಕ್ಷಣ ಜತೆಯಲ್ಲಿ ಕ್ರೀಡೆಗೂ ಸಹ ಸಮಾನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಬೇಕಾದ ಎಲ್ಲ ಪ್ರೋತ್ಸಾಹ, ಉತ್ತೇಜನ ನೀಡಲು ಸದಾ ಸಿದ್ಧನಿದೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಪದವಿ ಪೂರ್ವ ಕಾಲೇಜಿನ ಹೋಂಡಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ೨೦೨೬- ೨೭ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಶಿಕ್ಷಣ ಪಡೆಯುವ ಕಾಲದಲ್ಲಿ ಕ್ರೀಡೆ ಸಹ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆಯಲ್ಲಿ ಸೋಲು- ಗೆಲುವು ಅರಗಿಸಿಕೊಂಡು ಸಮಚಿತ್ತದಲ್ಲಿರುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಓದಿನ ಜತೆ ಪಠ್ಯೇತರ ಚಟುವಟಿಕೆಗಳು ನಮ್ಮ ದೈಹಿಕ- ಭೌತಿಕ- ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದ ಶಾಸಕರು, ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡುವ ಮೊಬೈಲ್ ಹಾಗೂ ಜಾಲತಾಣಗಳ ಅವಲಂಬನೆ ಕಡಿಮೆ ಮಾಡಿ. ಕೋಣೆಯಿಂದ ಹೊರಬಂದು ಮೈದಾನದಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ್ ಎಂ.ವಿ.ರೂಪ ,ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ವಿಜಯನರಸಿಂಹ ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ, ದರಕಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ, ಬಿ.ಇ.ಒ.ಕೆಂಪಯ್ಯ, ಸಮನ್ವಯಾಧಿಕಾರಿ ವೆಂಕಟಸ್ವಾಮಿ , ಪ್ರೌ.ಶಾ.ಸ.ಶಿ.ಸಂ.ಅಧ್ಯಕ್ಷ ಶ್ರೀನಿವಾಸ್ , ಪ್ರಾ.ಶಿ.ಸಂ.ಅಧ್ಯಕ್ಷ ನಾರಾಯಣಸ್ವಾಮಿ ,ಉಪಾಧ್ಯಕ್ಷ ಜಿ.ಮುನಿಯಪ್ಪ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣಪ್ಪ, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸುರೇಂದ್ರ , ಕಾ.ನಿ.ಪ.ಸಂ.ಅಧ್ಯಕ್ಷ ಡಿ.ಎಂ.ವಿಜಯಕುಮಾರ್ ,ದಯಾನಂದ್ ,ಶಿಕ್ಷಕ ಗೋಪಿ, ಮುನಿವೆಂಕಟಪ್ಪ, ಮಂಜುನಾಥ್ , ಶ್ರೀನಿವಾಸ್ , ಮುಖಂಡರಾದ ಮುರಳಿ, ಮಂಜು, ಚಂದ್ರು ಇನ್ನಿತರರು ಇದ್ದರು.