ಮುಂಡಗೋಡ ತಾಲೂಕಿನಲ್ಲಿ 1600 ಹೆಕ್ಟೇರ್ ಭೂಮಿಯನ್ನು ಟಿಬೇಟಿಯನ್ ಕಾಲನಿಗೆ ನೀಡುವ ಸರ್ಕಾರ, ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ 53 ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುವುದು ಖೇದಕರ.
ಜಿಲ್ಲೆಗೆ ಯೋಜನೆ ಸಾಕಪ್ಪ ಸಾಕು
ಅರಣ್ಯವಾಸಿಗಳು ಮುಖ್ಯ ಮಂತ್ರಿಗೆ ಬರೆಯುವ ಪತ್ರ ಪ್ರದರ್ಶನಕನ್ನಡಪ್ರಭ ವಾರ್ತೆ ಶಿರಸಿಈಗಾಗಲೇ ಜಿಲ್ಲೆಯಲ್ಲಿ 68 ಸಾವಿರ ಹೆಕ್ಟೇರ್ ಪ್ರದೇಶ ವಿವಿಧ ಯೋಜನೆಗೆ ಅರಣ್ಯ ಭೂಮಿ ನೀಡಿದ್ದು, ಜಿಲ್ಲೆಯ 80 ಸಾವಿರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ನೀತಿ ವಿಷಾದನೀಯ ಜಿಲ್ಲೆಯ ಯೋಜನೆಗೆ ಅರಣ್ಯ ಭೂಮಿ ಸಾಕು, ಜೀವನಕ್ಕಾಗಿ ಅವಲಂಬಿತ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆಯಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು..ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಅರಣ್ಯವಾಸಿಗಳು ಮುಖ್ಯಮಂತ್ರಿಗೆ ಬರೆಯುವ ಪತ್ರ ಪ್ರದರ್ಶಿಸಿ ಮಾತನಾಡಿದರು.ಸ್ವಾತಂತ್ರ್ಯ ದೊರಕಿದ ನಂತರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಮತ್ತು ಜೀವನಕ್ಕಾಗಿ 80 ಸಾವಿರ ಅರಣ್ಯವಾಸಿಗಳು, ಸುಮಾರು 53 ಸಾವಿರ ಎಕರೆ ಪ್ರದೇಶ ಸಾಗುವಳಿ ಮಾಡುತ್ತಿರುವುದು ದಾಖಲೆಯಲ್ಲಿ ಕಂಡುಬರುತ್ತದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಾಗಲೂ, ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ಮರಿಚೀಕೆಯಾಗಿದೆ. ಸುಪ್ರೀಂ ಕೊರ್ಟ್‌ನಲ್ಲಿ ಅರಣ್ಯ ಭೂಮಿ ಒಕ್ಕಲೆಬ್ಬಿಸುವ ಅಂತಿಮ ವಿಚಾರಣೆ ಜರುಗುತ್ತಿರುವ ಹಿನ್ನೆಲೆ ಧಾರಾಳವಾಗಿ ಯೋಜನೆಗೆ ಸರ್ಕಾರ ಅರಣ್ಯ ಭೂಮಿ ನೀಡುತ್ತೀರುವುದನ್ನು ಖಂಡಿಸಿ ಹಾಗೂ ಜಿಲ್ಲೆಯ ದಾರಣ ಸಾಮಥ್ಯಕ್ಕಿಂತ ಹೆಚ್ಚು ಅರಣ್ಯ ಭೂಮಿ ಅರಣ್ಯೇತರ ಚಟುವಟಿಕೆಗೆ ಬಿಡುಗಡೆಗೊಳಿಸುತ್ತಿರುವುದನ್ನು ಆಕ್ಷೇಪಿಸಿ, ಮುಖ್ಯಮಂತ್ರಿ ಗಮನಕ್ಕೆ ತರುವ ಹಿನ್ನೆಲೆಯಲ್ಲಿ ಪತ್ರ ಬರೆಯಲಾಗುತ್ತಿದೆ ಎಂದು ಹೇಳಿದರು.
ಮುಂಡಗೋಡ ತಾಲೂಕಿನಲ್ಲಿ 1600 ಹೆಕ್ಟೇರ್ ಭೂಮಿಯನ್ನು ಟಿಬೇಟಿಯನ್ ಕಾಲನಿಗೆ ನೀಡುವ ಸರ್ಕಾರ, ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ 53 ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದರು.ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ನಾಗರಾಜ ದೇವಸ್ಥಳಿ, ಮಲ್ಲೇಶಿ ಬಾಳೆಹಳ್ಳಿ, ನೆಹರು ನಾಯ್ಕ ಬಿಳೂರು, ಎಂ.ಆರ್. ನಾಯ್ಕ ಕಂಡ್ರಾಜಿ, ಚಂದ್ರು ಶಾನಭಾಗ ಬಂಡಲ್, ಲಕ್ಷ್ಮಣ ನಾಯ್ಕ ದೊಡ್ನಳ್ಳಿ, ವಿನೋದ ತಳೇಕರ್ ಹಾಸಣಗಿ, ಕುಸುಮಾ ಬೇಡರ್, ಗಂಗಾ ನಾಯ್ಕ ಗೋಳಿ, ಪರಮೇಶ್ವರ ವಾನಳ್ಳಿ, ಈರಪ್ಪ ಕಾಗಿನಳಿ ಮುಂತಾದವರಿದ್ದರು.ಫೆ.11ಕ್ಕೆ ಮನವಿಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ಸಿದ್ದಾಪುರದ ನೆಹರು ಮೈದಾನದಲ್ಲಿ ಫೆ11ರಂದು ಬೆಳಗ್ಗೆ 10.30ಕ್ಕೆ ಜರುಗಲಿರುವ ಬೃಹತ್ ಸಭೆಯಲ್ಲಿ ಅರಣ್ಯವಾಸಿಗಳು ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.