ಸಾರಾಂಶ
ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಬಾಗ
ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಮಂಜೂರಾದ ₹1.55 ಕೋಟಿ ಅನುದಾನದಲ್ಲಿ ಪ್ರೌಢಶಾಲೆಗೆ ನಿರ್ಮಿಸಿರುವ ನೂತನ 10 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ಹಳ್ಳಿಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಗುಣಮಟ್ಟದಿಂದ ಸುಂದರವಾಗಿ ನಿರ್ಮಿಸಿರುವ ಈ ಶಾಲಾ ಕಟ್ಟಡದ ಸದುಪಯೋಗವನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.ಬಿಇಒ ಬಸವರಾಜಪ್ಪ ಆರ್.ಲೋಕೋಪಯೋಗಿ ಇಲಾಖೆ ಎಇಇ ಆರ್.ಬಿ.ಮನವಡ್ಡರ, ಎಇ ರಾಮಚಂದ್ರ ಅವತಾಡೆ, ಪಿ.ಎಸ್.ಶಾರಬಿದ್ರೆ, ಕೃಷ್ಣಾ ಕುಂದರಗಿ, ಮಹಾದೇವ ನಾಯಿಕ, ಶಿವಪ್ಪ ನಾಯಿಕ, ಅಕ್ಕವ್ವ ಕಾಂಬಳೆ, ರಮೇಶ ಪಾಟೀಲ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಸರ್ಕಾರದ ಅನುದಾನದ ಜೊತೆಗೆ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಮ್ಮ ಶಾಲೆ ನನ್ನ ಜವಾಬ್ದಾರಿ ಯೋಜನೆಯಲ್ಲಿ ದಾನಿಗಳಾದ ಮಹೇಶ ಬೆಲ್ಲದ ಅವರು ಸ್ಮಾರ್ಟ್ ಬೋರ್ಡ್‌ಗಾಗಿ ₹3 ಲಕ್ಷ ದೇಣಿಗೆ ನೀಡಿದ್ದಾರೆ. ಇವರ ಜೊತೆಗೆ ಸಾರ್ವಜನಿಕರು, ಪಾಲಕರು ಕೂಡ ಈ ಶಾಲೆಗೆ ದೇಣಿಗೆ ನೀಡಿದ್ದರಿಂದ ಅವರಿಗೆ ಅಭಿನಂದನೆಗಳು.-ಡಿ.ಎಂ.ಐಹೊಳೆ,
ಶಾಸಕರು.