ಬೇಡಿಕೆ ಈಡೇರಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ

| Published : Feb 12 2025, 12:32 AM IST

ಸಾರಾಂಶ

ತರೀಕೆರೆ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತರೀಕೆರೆ

ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಹಲವಾರು ಬೇಡಿಕೆಗಳನ್ನು 2024 ಸೆ. 26 ರಿಂದ 2024 ಅ. 3ರ ವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಲಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರ ಮೇರೆಗೆ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಈ ದಿನದವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಬದಲಾಗಿ ಮುಷ್ಕರದ ಪೂರ್ವ ಅವಧಿಗಿಂತಲೂ ಹೆಚ್ಚಿನ ಕೆಲಸದ ಒತ್ತಡ ಉಂಟಾದ ಕಾರಣ ಫೆ.10 ರಿಂದ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನು ಈ ಕೆಳಕಂಡ ಬೇಡಿಕೆಗಳನ್ನು ಒತ್ತಾಯಿಸಿ ಮತ್ತೊಮ್ಮೆ ಹಮ್ಮಿಕೊಳ್ಳಲಾಗಿದೆ.ಬೇಡಿಕೆಗಳು ಸುಸಜ್ಜಿತವಾದ ಕಚೇರಿ ಮೊಬೈಲ್ ಫೋನು ಲ್ಯಾಪ್‌ಟಾಪ್‌ ಪ್ರಿಂಟರ್ ಸ್ಕ್ಯಾನರ್ ನೀಡಲು ಗ್ರಾಮಾಡಳಿತ ಅಧಿಕಾರ ಹುದ್ದೆಯನ್ನು ತಾಂತ್ರಿಕ ಹುದ್ದೆ ಎಂದು ಪರಿವರ್ತಿಸಲು, ರಾಜ್ಯಮಟ್ಟದ ಜೇಷ್ಠತೆ ತಯಾರಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಅನುವು ಮಾಡಿಕೊಡುವುದು, ಅವೈಜ್ಞಾನಿಕ ಪೌತಿ ಖಾತೆ ಆಂದೋಲನ ಕೈಬಿಡಬೇಕು, ಪ್ರಯಾಣ ಭಕ್ತಿಯನ್ನು ₹500 ರಿಂದ 5,000 ಕ್ಕೆ ಹೆಚ್ಚಿಸುವುದು, ಕರ್ತವ್ಯದ ಅವಧಿಯಲ್ಲಿ ನೌಕರ ಮೃತಪಟ್ಟರೆ ನೌಕರರ ಕುಟುಂಬಕ್ಕೆ ಪರಿಹಾರ ನೀಡಲು ಪ್ರಸ್ತುತ ಜನಸಂಖ್ಯೆಗೆ ಗ್ರಾಮ ಆಡಳಿತ ಅಧಿಕಾರಿಗಳ ಪುನಾರಚಿಸಲು ಕೋರಿ ಎಲ್ಲಾ ಬಗೆಯ ಮೊಬೈಲ್ ವೆಬ್ ಅಪ್ಲಿಕೇಶನ್ ಕೆಲಸಗಳು ಮತ್ತು ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.ತರೀಕೆರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ, ಸಂಘದ ನಿರ್ದೇಶಕರು ಬೆಂಬಲ ಸೂಚಿಸಿದ್ದು, ಗ್ರಾಮ ಆಡಳಿತ ಸಂಘದ ಅಧ್ಯಕ್ಷ ವೀಣಾ ಟಿ.ಸಿ. ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್, ಉಪಾಧ್ಯಕ್ಷ ಕಾರ್ತಿಕ್ ಡಿಎಂ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಅಡಳಿತ ಅಧಿಕಾರಿಗಳು ಮುಷ್ಕರ ಕೈಗೊಂಡಿದ್ದರು.10ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.