ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಕೊಡಿಸಿ: ಪಿಡಿಒ ಮಹೇಶ್

| Published : Jan 25 2024, 02:03 AM IST

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಕೊಡಿಸಿ: ಪಿಡಿಒ ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಕ್ಷೇತ್ರದಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಹೆಣ್ಣು ಸಾಧನೆ ಮಾಡಿದ್ದಾಳೆ. ಹೆಣ್ಣನ್ನು ಕೇವಲ ಹೆಣ್ಣೆಂದು ಅಲ್ಲಗಳೆಯುವ ಬದಲು ಆಕೆಗೆ ಉತ್ತಮ ಅವಕಾಶ, ಸಮಾನತೆ ಕಲ್ಪಿಸಿ ಕೊಡಬೇಕು.

ಗುಂಡ್ಲುಪೇಟೆ: ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಬನ್ನಿತಾಳಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್ ಎ.ಎಂ ಸಲಹೆ ನೀಡಿದರು. ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಹೆಣ್ಣಿಗೆ ಗೌರವ, ಉನ್ನತ ಸ್ಥಾನ ದೊರೆಯಬೇಕು. ಕೃಷಿ ಕ್ಷೇತ್ರದಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಹೆಣ್ಣು ಸಾಧನೆ ಮಾಡಿದ್ದಾಳೆ. ಹೆಣ್ಣನ್ನು ಕೇವಲ ಹೆಣ್ಣೆಂದು ಅಲ್ಲಗಳೆಯುವ ಬದಲು ಆಕೆಗೆ ಉತ್ತಮ ಅವಕಾಶ, ಸಮಾನತೆ ಕಲ್ಪಿಸಿ ಕೊಡಬೇಕು ಎಂದರು. ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಮಾತನಾಡಿ, ಕಳೆದ ಮೂರುವರೆ ದಶಕಗಳಿಂದ ನಮ್ಮ ಸಂಸ್ಥೆ ಬಾಲ ಕಾರ್ಮಿಕತೆ, ಬಾಲ್ಯ ವಿವಾಹ ವಿರೋಧಿ ಹಾಗೂ ಮಹಿಳಾ ಸಬಲೀಕರಣ ಮುಂತಾದ ವಿಚಾರಗಳ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಬನ್ನಿತಾಳಪುರ ಗ್ರಾಪಂ ಅಧ್ಯಕ್ಷ ಮಹೇಶ್ ಜೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರವ್ವ ಕೆಳಗೇರಿ, ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಬಸವಯ್ಯ, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

--------

ಬನ್ನಿತಾಳಪುರ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ್‌ ಜೆ. ಭಿತ್ತಿಪತ್ರ ಬಿಡುಗಡೆಗೊಳಿಸಿದರು.