ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅರ್ಹ ಫಲಾನುಭವಿಗಳಿಗೆ ಸ್ಲಮ್ ಬೋರ್ಡ್‌ನಲ್ಲಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.ನಾಗಮಂಗಲ ಪಟ್ಟಣದ ವಾರ್ಡ್ ನಂ.1 ವ್ಯಾಪ್ತಿಯ ಸುಭಾಷ್ ಚಂದ್ರ ಬೋಸ್ ನಗರ ಕೊಳೆಗೇರಿ ಪ್ರದೇಶದಲ್ಲಿ ನರ್ಮ್-ಐಎಚ್ ಎಸ್ ಡಿಪಿ ಯೋಜನೆಯಡಿ ನಿರ್ಮಿಸಿರುವ 226 ಮನೆಗಳಿಗೆ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ನಾಗಮಂಗಲ ಸುಭಾಷ್ ಚಂದ್ರ ಬೋಸ್ ಕೊಳಗೇರಿಯ 9 ಎಕರೆ 39 ಗುಂಟೆ ಪ್ರದೇಶದಲ್ಲಿ 226 ಮನೆಗಳು ನಿರ್ಮಾಣಗೊಂಡಿವೆ. ಅಲ್ಲಿಯ ಮನೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಬೇಕು. ಫಲಾನುಭವಿಗಳು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದರು.ಸ್ಲಮ್ ಬೋರ್ಡ್ ಪ್ರಕಾರ ಎಷ್ಟು ಜನ ಫಲಾನುಭವಿಗಳು ಇದ್ದಾರೆ ಮತ್ತು ಸ್ಲಮ್ ಬೋರ್ಡ್‌ಗೆ ಒಳಪಡದೆ ಇರುವ ಎಷ್ಟು ಜನ ಫಲಾನುಭವಿಗಳಿದ್ದಾರೆ ಎಂದು ಪಟ್ಟಿ ಮಾಡಿ ಅವರು ಆಧಾರ್ ಸಂಖ್ಯೆ, ಹೆಸರು, ವಿಳಾಸ, ಕುಟುಂಬ ಸದಸ್ಯರು, ಅವರಿಗೆ ಇನ್ನಿತರೆ ನಿವೇಶನಗಳು ಇದೆಯಾ, ಅವರು ಮೂಲ ನಿವಾಸಿಗಳಾ ಎಂದು ಪರೀಶೀಲನೆ ನಡೆಸಲು ತಹಸೀಲ್ದಾರ್, ಚೀಫ್ ಆಫೀಸರ್, ಸ್ಲಮ್ ಬೋರ್ಡ್ ಕಾರ್ಯಪಾಲಕ ಅಭಿಯಂತರರು ಮತ್ತು ಜೆಎನ್‌ಯು, ಪುರಸಭೆ ಮುಖ್ಯಾಧಿಕಾರಿ ಒಳಗೊಂಡಂತೆ ಒಂದು ತಂಡ ರಚಿಸಿ ಎಂದು ಹೇಳಿದರು.
ಜಿಪಿಎಸ್ ಫೋಟೋಗಳೊಂದಿಗೆ ಪ್ರತಿ ನಿವಾಸಕ್ಕೂ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಹಸೀಲ್ದಾರ್ ಆದರ್ಶ್, ಜಬ್ರುಲ್ಲಾ, ಯೋಗಾನಂದ, ಪುರಸಭೆ ಸದಸ್ಯ ನರಸಿಂಹ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಜೆಡಿಎಸ್ ವಕ್ತಾರರಾಗಿ ಎಸ್.ಎಂ.ವೇಣುಗೋಪಾಲ್ ನೇಮಕ
ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ರಾಜ್ಯ ವಕ್ತಾರರನ್ನಾಗಿ ಸಾತನೂರು ವೇಣುಗೋಪಾಲ್ ಎಸ್.ಎಂ. ಅವರನ್ನು ನೇಮಕ ಮಾಡಿ ಪಕ್ಷದ ಮುಖ್ಯಸ್ಥರು ಹಾಗೂ ರಾಜ್ಯ ವಕ್ತಾರರಾದ ಕೆ.ಟಿ.ಶ್ರೆಕಂಠೇಗೌಡ ಅವರು ಆದೇಶ ಹೊರಡಿಸಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಜೆಡಿಎಸ್ ಪಕ್ಷದ ಸರ್ಕಾರಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನ ಮಾಡಬೇಕು ಎಂದು ಸೂಚಿಸಿದ್ದಾರೆ.
ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು. ಚರ್ಚೆಗಳಲ್ಲಿ ಪಕ್ಷದ ತತ್ವ, ಸಿದ್ಧಾಂತ, ಧ್ಯೇಯ-ಧೋರಣೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡಿ ಅಗತ್ಯವಿರುವ ದಾಖಲಾತಿ ಮತ್ತು ದತ್ತಾಂಶಗಳೊಂದಿಗೆ ಭಾಗವಹಿಸುವಂತೆ ಸಲಹೆ ನೀಡಿದ್ದಾರೆ.