ಪಟ್ಟಣದಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ತೆರೆದು ಗಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪಟ್ಟಣದಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ತೆರೆದು ಗಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ನಗರದ ಶ್ರೀ ಶಾಲಾ ಸನ್ ಶೈನ್ ಇಂಗ್ಲಿಷ್ ಶಾಲೆಯ ನೂತನ‌ ಕಟ್ಟಡದ ಉದ್ಘಾಟನೆ ಹಾಗೂ‌ ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಗತ್ತಿನಲ್ಲಿ ತಾಂತ್ರಿಕತೆ ಅತ್ಯಂತ ಮಹತ್ವ ಪಡೆದಿದ್ದು ಹೆಚ್ಚು ಅಂಕ ಹಾಗೂ ಕೌಶಲ್ಯ ನೈಪುಣ್ಯತೆ ಇರುವವರಿಗೆ ಅವಕಾಶಗಳು ಹೆಚ್ಚು ಒದಗಿ ಬರಲಿವೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಉತ್ತಮ ಸಂಸ್ಕಾರ ನಡೆನುಡಿ ರೂಪಿಸುವಲ್ಲಿ ತಂದೆ ತಾಯಿ ಹಾಗೂ ಶಿಕ್ಷಕರ ಪಾತ್ರ ಹೆಚ್ಚಿದೆ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.

ಶಾಲೆಯ ಸಂಸ್ಥಾಪಕ ಜಿ.ವೆಂಕಟರಾಮಯ್ಯ ಮಾತನಾಡಿ ,ಗಡಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿನ್ನಲೆಯಲ್ಲಿ ಸುಸಜ್ಜಿತ ಹಾಗೂ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಶಿಸ್ತು ಮತ್ತು ಸಂಸ್ಕಾರದ ಜತೆಗೆ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದು, ಶಾಲೆಯ ಅನೇಕ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾದ ಎನ್. ಲಕ್ಷ್ಮಿ ನಾರಾಯಣ ಮಾತನಾಡಿದರು. ನಿರ್ದೇಶಕ ಲಕ್ಷ್ಮಿ ಜಿ.ವೆಂಕಟರಾಮಯ್ಯ, ಡಾ. ಜಿ.ವಿ.ಶಶಿಕಿರಣ್ ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.