ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಹಾಲು ಉತ್ಪಾದಕರು ಹಾಲಿನ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ ಹೆಚ್ಚು ಹಾಲು ಉತ್ಪಾದನೆ ಮಾಡುವತ್ತ ಕಾಳಜಿ ವಹಿಸಿದರೆ ಹೈನುಗಾರಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಸು ಎತ್ತುವ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಹೈನುಗಾರಿಕೆ ಶಿರಾ ತಾಲೂಕಿನ ರೈತರ ಜೀವ ನಾಡಿಯಾಗಿದ್ದು, ಹಾಲು ಉತ್ಪಾದಕ ರೈತರು ತಮ್ಮ ರಾಸುಗಳು ಆನಾರೋಗ್ಯಕ್ಕೆ ಒಳಗಾದಗ ಅವುಗಳಿಗೆ ಚಿಕಿತ್ಸೆ ಕಷ್ಟಕರವಾಗಿತ್ತು ಇದನ್ನು ಅರಿತು ತುಮಕೂರು ಹಾಲು ಒಕ್ಕೂಟ ಆನಾರೋಗ್ಯ ಪೀಡಿತ ರಾಸುಗಳ ಪೋಷಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಲು ಸುಲಭವಾಗಿಸುವ ನಿಟ್ಟಿನಲ್ಲಿ ಶಿರಾ ತಾಲೂಕಿನ ೧೦ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರಾಸುಗಳನ್ನು ಎತ್ತುವ ಯಂತ್ರಗಳನ್ನು ವಿತರಣೆ ಮಾಡಿದೆ. ಇದರ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ತಾಪಕ ಬಿ. ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಸಮಾಲೋಚಕ ಪ್ರವೀಣ್, ಬಾಬ ಫಕ್ರುದ್ದಿನ್ ಪಿ.ಎಂ., ಹನುಮಂತರಾಯಪ್ಪ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಅಜ್ಜಣ್ಣ, ಮುಖಂಡ ಕಿರಣ್ ಗೌಡ, ನೇಜಂತಿ ಅಭಿಲಾಷ್ ಗೌಡ, ತಿಮ್ಮರಾಜು, ಶ್ರೀನಿವಾಸ್, ಅಶ್ವಥ್ ಕುಮಾರ್ ಇತರರಿದ್ದರು.