ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾತುಮಕೂರು ಜಿಲ್ಲಾಸ್ಪತ್ರೆಯನ್ನು ಹೊರತುಪಡಿಸಿದರೆ ಶಿರಾ ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆಗೆ ತಾಲೂಕು, ಆಂಧ್ರಪ್ರದೇಶದ ರೋಗಿಗಳು ಬರುತ್ತಿದ್ದು, ಆಸ್ಪತ್ರೆಗೆ ಅವಶ್ಯವಿರುವ ಪರಿಕರಗಳನ್ನು ಖಾಸಗಿ ಕಂಪನಿಗಳ ಸಿ.ಎಸ್.ಆರ್. ನಿಧಿಯಿಂದ ಒದಗಿಸಿ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉನ್ನತೀಕರಣಗೊಂಡ 8 ಹಾಸಿಗೆಗಳ ಡಯಾಲಿಸಿಸ್ ರಕ್ತ ಶುದ್ಧೀಕರಣ ಘಟಕ ಹಾಗೂ ಆಂಬ್ಯುಲೆನ್ಸ್ ಸೇವೆಗಳನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಬೆಂಚೆ ಗ್ರಾಮದ ಹರೀಶ್ ಎಂಬುವರು ಸಿ.ಎಸ್.ಆರ್ ನಿಧಿ ಅಡಿಯಲ್ಲಿ ಇನ್ಫಾರ್ ಮ್ಯಾಟಿಕಾ ಬ್ಯುಸಿನೆಸ್ ಸಲ್ಯೂಷನ್ ಕಂಪನಿಯವರಿಂದ ₹65 ಲಕ್ಷ ಬೆಲೆಬಾಳುವ ಎರಡು ಡಯಾಲಿಸಿಸ್ ಯಂತ್ರ, 15 ಐಸಿಯು ಡಯಾಲಿಸಿಸ್ ಬೆಡ್‌ಗಳನ್ನು ಹಾಗೂ 40 ವಿಶೇಷ ಬಡ್‌ಗಳನ್ನು ಆಸ್ಪತ್ರೆಗೆ ಕೊಡಿಸುವುದರ ಮೂಲಕ ಸಹಾಯ ಮಾಡಿದ್ದಾರೆ ಎಂದರು.
ಇತರರು ಕೂಡ ತಮಗೆ ಪರಿಚಯವಿರುವ ಕಂಪನಿಗಳಿಂದ ಸಿಎಸ್ಆರ್ ನಿಧಿಯನ್ನು ಈ ಆಸ್ಪತ್ರೆಗೆ ಕೊಡಿಸುವುದರ ಮೂಲಕ ಸಹಾಯ ಮಾಡಲು ಮುಂದಾಗಬೇಕು. ಶಿರಾದಲ್ಲಿ ಸ್ಥಾಪಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್ಆರ್ ಫಂಡ್‌ಗಳನ್ನು ಕೊಡಿಸುವ ಕೆಲಸ ನಾನು ಮಾಡುತ್ತೇನೆಂದು ಭರವಸೆ ನೀಡಿದರು.ಶಿರಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆಗೆ ಪ್ರತಿದಿನ ಚಿಕಿತ್ಸೆ ಪಡೆಯುವ ರೋಗಿಗಳ ಕ್ರಮೇಣ ಹೆಚ್ಚಾಗುತ್ತಿದ್ದು, ಆಸ್ಪತ್ರೆ ಅಭಿವೃದ್ಧಿಗೆ ಜಾಗದ ಕೊರತೆ ಉಂಟಾದರೆ, ಪಕ್ಕದಲ್ಲಿರುವ ಪಶು ವೈದ್ಯ ಆಸ್ಪತ್ರೆ , ಹಾಗೂ ಲೋಕೋಪಯೋಗಿ ಕಚೇರಿಗಳ ಜಾಗಗಳನ್ನು ಆಸ್ಪತ್ರೆಗೆ ಬಳಸಿಕೊಂಡು, ಆ ಇಲಾಖೆಗಳಿಗೆ ಬೇರೆ ಕಡೆ ಜಾಗ ನೀಡುತ್ತೇನೆ ಎಂದರು. ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಾಥ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್, ಗ್ಲೋಬಲ್ ಡೆವಲಪ್ಮೆಂಟ್ ಆಫೀಸರ್ ಮುತ್ತು ಕುಮಾರ್, ನೆಫ್ರೋ ಪ್ಲಸ್ ವಿಭಾಗೀಯ ವ್ಯವಸ್ಥಾಪಕ ಸುಧಾಕರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೋಭಾ ನಾಗರಾಜ್, ನಗರಸಭೆ ಸದಸ್ಯೆ ಉಮಾ ವಿಜಯರಾಜ್, ಪ್ರಧಾನ್ ನಾಗರಾಜ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪುಟ್ಟರಾಜು, ಮಂಜುಳಾ ಶೇಷ ನಾಯಕ್, ಆರೋಗ್ಯರಕ್ಷಾ ಸಮಿತಿ ಸದಸ್ಯ ಮಣಿಕಂಠ ಹಾಜರಿದ್ದರು.
;Resize=(128,128))
;Resize=(128,128))