ಸಾರಾಂಶ
ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರದ ಉದ್ದೇಶದಿಂದ ಶಿರಸಿ ತಾಲೂಕಿನ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಕಾರವಾರದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಜಿಪಂ ಸಿಇಒಗೆ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳ ಮನವಿ
ಕನ್ನಡಪ್ರಭ ವಾರ್ತೆ ಶಿರಸಿ
ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರದ ಉದ್ದೇಶದಿಂದ ಶಿರಸಿ ತಾಲೂಕಿನ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಕಾರವಾರದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಭೇಟಿಯಾಗಿ ಮನವಿ ಸಲ್ಲಿಸಿದರು.ಗ್ರಾಪಂ 15ನೇ ಹಣಕಾಸಿನ ಕಾಮಗಾರಿಗಳ ಆರಂಭ, ಈಗಾಗಲೇ ಅನುಮೋದಿಸಿದ ಅವಶ್ಯ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಲು ಅನುಮತಿ ನೀಡಬೇಕು. ಬಾಕಿ ಹಣಕ್ಕೆ ಯೋಜನೆ ರೂಪಿಸುವಿಕೆ, 15ನೇ ಹಣಕಾಸಿನಲ್ಲಿ ಉಳಿದಿರುವ ಬಾಕಿ ಹಣವನ್ನು ಬಳಸಿಕೊಳ್ಳಲು ಸಪ್ಲಿಮೆಂಟರಿ ಆಕ್ಷನ್ ಪ್ಲಾನ್ ಮಾಡಿಸಲು ಕ್ರಮ ಕೈಗೊಳ್ಳಬೇಕು.ಕಾಮಗಾರಿಗಳ ಬದಲಾವಣೆಗೆ ಅನುಮತಿಗೆ ಅವಕಾಶ, ಕೆಲವು ನಿರ್ದಿಷ್ಟ ಕಾಮಗಾರಿಗಳಲ್ಲಿ ಎದುರಾಗಿರುವ ಸಮಸ್ಯೆಗಳ ನಿವಾರಣೆಗೆ ''''ಚೇಂಜ್ ಆಫ್ ವರ್ಕ್'''' ಮಾಡಲು ಅವಕಾಶ, ತಕ್ಷಣವೇ ಸ್ವತ್ತಿನ ಸಂಖ್ಯೆ ನೀಡಲು ಇ-ಸ್ವತ್ತು ತಂತ್ರಾಂಶ ಮುಕ್ತಗೊಳಿಸಿ, ಇದರಿಂದ ಎದುರಾಗುತ್ತಿರುವ 11ಬಿ ಪ್ರಮಾಣಪತ್ರಗಳ ಸಮಸ್ಯೆ ಬಗೆಹರಿಸಬೇಕು. ಎಸ್ಕ್ರೋ ಖಾತೆಯಲ್ಲಿ ಸಂಗ್ರಹವಾಗಿರುವ ಹಣವನ್ನು ಗ್ರಾಪಂ ಕಾಮಗಾರಿಗಳಿಗೆ ಬಳಸಲು ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಅನುಮತಿ ನೀಡುವಂತೆ ಆಗ್ರಹಿಸಿದರು.ಸಿಇಒ ಭರವಸೆ:ನಿಯೋಗದ ಮನವಿ ಆಲಿಸಿದ ಜಿಪಂ ಸಿಇಒ, ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವುದಾಗಿ ಮತ್ತು ಗ್ರಾಪಂಗಳಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಜಯರಾಮ್ ಹೆಗಡೆ, ಗಜಾನನ ನಾಯ್ಕ, ಪ್ರವೀಣ ಹೆಗಡೆ, ಮಂಜುನಾಥ್ ಭಂಡಾರಿ, ನಾಗರಾಜ ಹೆಗಡೆ, ಅನುಸೂಯ ಹೆಗಡೆ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))