ಸಾರಾಂಶ
5 ವರ್ಷದದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಆಸೀಪ್ ಸೇಠ್ ಹೇಳಿದರು
ಕನ್ನಡಪ್ರಭ ವಾರ್ತೆ ಬೆಳಗಾವಿ
5 ವರ್ಷದದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಆಸೀಪ್ ಸೇಠ್ ಹೇಳಿದರುಇಲ್ಲಿನ ವಂಟಮೂರಿ ಕಾಲೋನಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, 5 ವರ್ಷದೊಳಗಿನ ಮಕ್ಕಳಿಗೆ ದೇಶಾದ್ಯಂತ ಪೋಲಿಯೋ ಲಸಿಕೆಯನ್ನು ನೀಡಲಾಗುತ್ತಿದೆ. ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಈ ಸುತ್ತಿನಲ್ಲಿ ನಿಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಸಬೇಕೆಂದು ಕರೆ ನೀಡಿದರು. ಅನಿವಾರ್ಯ ಕಾರಣಗಳಿಂದ ಇವತ್ತಿನ ದಿನ ಲಸಿಕೆ ಪಡೆಯದ ಮಕ್ಕಳಿಗೆ ಮನೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಯವರಲ್ಲಿ ತಪ್ಪದೇ ಪೋಲಿಯೋ ಲಸಿಕೆ ಕೊಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಮಾತನಾಡಿ, ಈಗಾಗಲೇ ಭಾರತ ದೇಶವು ಪೋಲಿಯೋ ಮುಕ್ತವಾಗಿದೆ. ಆದರೆ ನಮ್ಮ ದೇಶದ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿದ್ದು, ಮುಂಜಾಗ್ರತವಾಗಿ ನಮ್ಮಲ್ಲಿ ಪೋಲಿಯೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲರೂ ತಮ್ಮ 5 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕೆಂದು ತಿಳಿಸಿದರು.ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಜಿಲ್ಲಾ ತಾಯಿ ಮಕ್ಕಳ ಮತ್ತು ಸಂತಾನೋತ್ಪತ್ತಿ ಹಾಗೂ ಲಸಿಕಾ ಅಧಿಕಾರಿ ಡಾ.ಚೇತನ ಕಂಕಣವಾಡಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾನ, ನಗರ ಸೇವಕರಾದ ರಾಜಶೇಖರ ಡೋಣಿ, ಹನಮಂತ ಕೊಂಗಾಲಿ, ರೇಖಾ ಹೂಗಾರ, ಲಕ್ಷ್ಮೀ ರಾಠೋಡ, ಉಪನಿರ್ದೇಶಕ ಡಾ.ಎಮ್.ಎಸ್ ಪಲ್ಲೇದ, ಸಮೀಕ್ಷಾ ಅಧಿಕಾರಿ ಡಾ.ಸಿದ್ದಲಿಂಗಯ್ಯಾ, ತಾಲೂಕು ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ, ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಸಂಜಯ ನಾಂದ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮೂರಿಯ ವೈದ್ಯಾಧಿಕಾರಿಗ ಡಾ.ಜಯಾನಂದ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಚಿತಿ ಉದಯಕುಮಾರ, ಲೈನ್ಸ್ ಕ್ಲಬ್ ಮಿಡ್ ಟೌನ ಬೆಳಗಾವಿಯ ಅಧ್ಯಕ್ಷ ರವಿಶಂಕರ ಮಠದ ಮತ್ತು ಪದಾಧಿಕಾರಿಗಳು ಹಾಗೂ ವಂಟಮೂರಿ ಕಾಲನಿಯ ತಾಯಿಂದಿರು, ಸಾರ್ವಜನಿಕರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.